ಮೂಡುಬಿದಿರೆ ಪರಿಸರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಎರಡು ಪ್ರಕರಣಗಳು ನಡೆದಿದೆ.ಶುಕ್ರವಾರ ಪುತ್ತಿಗೆ ಬಳಿ ಪಿಕಪ್ ವಾಹನದಲ್ಲಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಿಕೊಂಡು ಬರುತ್ತಿದ್ದ ಪುಚ್ಚಮೊಗರು ಗ್ರಾಮದ ದೇಜಪ್ಪ ಪೂಜಾರಿ ಮತ್ತು ಹೊಸಬೆಟ್ಟುವಿನ ಬ್ರಯಾನ್ ಗಾಡ್ವಿನ್ ರಾಡ್ರಿಗಸ್ ಎಂಬವರ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಎರಡು ದನಗಳನ್ನು ಶಿರ್ವ ಮಂಚಕಲ್ ನ ಗುರ್ಮೆ ಸುಂದರ ಶೆಟ್ಟಿ ಅವರ ಗೋ ಶಾಲೆಯಿಂದ ತಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಶನಿವಾರ ತೋಡಾರ್ ಶಾಂತಿಗಿರಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು ಗೋಸಾಗಾಟದ ಬಗ್ಗೆ ಮಾಹಿತಿ ತಿಳಿದ ಭಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿ ಆರೋಪಿಗಳಾದ ಭಾಸ್ಕರ ಶೆಟ್ಟಿ ಮತ್ತು ಪ್ರವೀಣ್ ಡಿಸೋಜ ಎಂಬವರನ್ನು ಪೊಲೀಸರಿಗೊಪ್ಪಿಸಿದ್ದಾರೆ.
