Latest News

ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಸುರೇಶ್ ಅಂಚನ್ ಹಾಗೂ ಕೊಡಿಯಾಲ್ ಬೈಲ್ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಎ.ಫ್ರೆಂಡ್ಸ್ ಹಮ್ಮಿಕೊಂಡಿದ್ದ ‘ಶಿವದೂತೆ ಗುಳಿಗೆ’ ನಾಟಕದ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಪೆರಾಡಿ ಸೊಸೈಟಿ ಬ್ಯಾಂಕ್ ಗೆ ಅವಿರೋಧವಾಗಿ ಆಯ್ಕೆಯಾದ ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್ ಹಾಗೂ ಕಲಾಸಂಗಮ ತಂಡದ ಮುಖ್ಯಸ್ಥರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥರಾದ ಯುವರಾಜ ಜೈನ್,ಬಿಜೆಪಿ ಮುಖಂಡರಾದ ಸುದರ್ಶನ ಎಂ, ಕೆ.ಪಿ.ಜಗದೀಶ್ ಅಧಿಕಾರಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ನಾರಾಯಣ ಪಿ.ಎಂ,ಅರುಣ್ ಪ್ರಕಾಶ್ ಶೆಟ್ಟಿ,ತೋಡಾರು ದಿವಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶಿರ್ತಾಡಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ,ಸುರೇಶ್ ಕೋಟ್ಯಾನ್,ನಿವೃತ್ತ ತಹಶಿಲ್ದಾರ್ ಅಚ್ಯುತ ಪಿ,ನ್ಯಾಯವಾದಿ ಶರತ್ ಶೆಟ್ಟಿ, ಎ.ಸಿ.ಎಫ್ ಪ್ರಕಾಶ್ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ವಾಸುದೇವ ನಾಯಕ್,ಜಯರಾಜ್ ಕಬಾಯ ಮರೋಡಿ, ರಾಜೇಶ್ ಪೂಜಾರಿ ಕಾಳೂರು ಅತಿಥಿಗಳಾಗಿ ಭಾಗವಹಿಸಿದ್ದರು.


ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಶ್ರಫ್ ವಾಲ್ಪಾಡಿ, ಪ್ರವೀಣ್ ಇರುವೈಲ್,ಪುರುಷೋತ್ತಮ ನಾಯಕ್ ಪುತ್ತಿಗೆ, ಸಂತೋಷ್ ಶೆಟ್ಟಿ ಮಿಜಾರ್, ಹಫೀಝ್ ತೋಡಾರ್, ಅಶ್ಫಾಕ್ ಮಿಜಾರ್, ದಿನೇಶ್ ಪ್ರಭು ಇರುವೈಲ್ ,ಅಲ್ತಾಫ್ ಮೂಡುಬಿದಿರೆ‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು