ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಲ್ಕನೇ ತರಗತಿ ವಿದ್ಯಾರ್ಥಿ ಅದ್ವಿ ಚೆಸ್ ಪಂದ್ಯಾಟದಲ್ಲಿ ರಾಜ್ಯಮಟ್ಟದಲ್ಲಿ ಗಮನಸೆಳೆದಿದ್ದಾನೆ.
ಹತ್ತರ ಹರೆಯದಲ್ಲೇ ತಾಲೂಕು,ಜಿಲ್ಲೆ ಹಾಗೂ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವು ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆಯುವ ಮೂಲಕ ಕ್ರೀಡಾ ಲೋಕದಲ್ಲಿ ಮಿಂಚುತ್ತಿರುವ ಈ ಬಾಲಕ ಊರಿಗೆ ಹಾಗೂ ಶಾಲೆಗೆ ಹೆಸರು ತಂದಿದ್ದಾನೆ.
ಈತ ತೆಂಕ ಎಡಪದವು ಯೋಗೀಶ್ – ಪ್ರೇಮ ದಂಪತಿಯ ಪುತ್ರ.
