ಬೈಂದೂರಿನ ಜೆ.ಎನ್.ಆರ್.ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಅಡ್ಡೂರಿನ ಸಹರಾ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
ಮರಿಯಮ್ ಅನಿಶಾ- ಕುಮಿಟೆಯಲ್ಲಿ ಬೆಳ್ಳಿಪದಕ,ಫಾತಿಮಾ ನಜಾಫ್- ಕುಮಿಟೆಯಲ್ಲಿ ಬೆಳ್ಳಿ ಪದಕ,ಮುಹಮ್ಮದ್ ಫಹಾದ್- ಕುಮಿಟೆಯಲ್ಲಿ ಚಿನ್ನದ ಪದಕ, ಮುಹಮ್ಮದ್ ಶಾಬ್ ಅಜೀಮ್-ಕತ ಹಾಗೂ ಕುಮಿಟೆಯಲ್ಲಿ ಕಂಚಿನ ಪದಕ, ಶೇಖ್ ಮುಹಮ್ಮದ್ ಮುಝಮ್ಮಿಲ್ -ಕತ ಹಾಗೂ ಕುಮಿಟೆಯಲ್ಲಿ ಬೆಳ್ಳಿ ಪದಕ, ಮುಹಮ್ಮದ್ ನವಲ್ -ಕುಮಿಟೆಯಲ್ಲಿ ಬೆಳ್ಳಿ ಹಾಗೂ ಕತದಲ್ಲಿ ಕಂಚಿನ ಪದಕ, ಮುಹಮ್ಮದ್ ಅಫ್ಹ -ಕುಮಿಟೆಯಲ್ಲಿ ಕಂಚಿನ ಪದಕ ಹಾಗೂ ಕತದಲ್ಲಿ ಚಿನ್ನದ ಪದಕ, ಮುಹಮ್ಮದ್ ಇಲಾಫ್ ಕನ್ಜ್ – ಕುಮಿಟೆಯಲ್ಲಿ ಕಂಚಿನ ಪದಕ, ಮುಹಮ್ಮದ್ ತನ್ವೀರ್ – ಕುಮಿಟೆಯಲ್ಲಿ ಬೆಳ್ಳಿ ಪದಕ ಹಾಗೂ ಕತದಲ್ಲಿ ಕಂಚಿನ ಪದಕ,ಮೊಯ್ದಿನ್ ಹಸನ್ ಶನ್ನಾಫ್ -ಕುಮಿಟೆಯಲ್ಲಿ ಕಂಚಿನ ಪದಕ ಹಾಗೂ ಕತದಲ್ಲಿ ಚಿನ್ನದ ಪದಕ, ಮುಹಮ್ಮದ್ ಇಬ್ರಾಹಿಂ ಫಾಹಿಕ್-ಕುಮಿಟೆಯಲ್ಲಿ ಚಿನ್ನದ ಪದಕ ಹಾಗೂ ಕತದಲ್ಲಿ ಬೆಳ್ಳಿ ಪದಕ, ಮುಹಮ್ಮದ್ ರಿಯಾನ್ ಕುಮಿಟೆ ಹಾಗೂ ಕತದಲ್ಲಿ ಚಿನ್ನದ ಪದಕ, ಮುಹಮ್ಮದ್ ಅಮೀನ್- ಕುಮಿಟೆ ಹಾಗೂ ಕತದಲ್ಲಿ ಬೆಳ್ಳಿ ಪದಕ, ಮುಹಮ್ಮದ್ ಮುಝಮ್ಮಿಲ್ -ಕುಮಿಟೆಯಲ್ಲಿ ಬೆಳ್ಳಿ ಹಾಗೂ ಕತದಲ್ಲಿ ಕಂಚಿನ ಪದಕ,ಶೇಖ್ ಮುಹಮ್ಮದ್ ಹಿಶಾಮ್ -ಕುಮಿಟೆಯಲ್ಲಿ ಬೆಳ್ಳಿ ಪದಕ, ಮುಹಮ್ಮದ್ ಶಫೀಕ್ – ಕುಮಿಟೆ ಹಾಗೂ ಕತದಲ್ಲಿ ಬೆಳ್ಳಿ ಪದಕ ಮತ್ತು ನಹೀಮ್ ಅಬೂಬಕ್ಕರ್ ಹುಸೈನ್ – ಕುಮಿಟೆ ಹಾಗೂ ಕತದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಶಾಲೆಗೆ ಹೆಸರು ತಂದಿದ್ದಾರೆ.
ಪದಕ ವಿಜೇತ ವಿದ್ಯಾರ್ಥಿಗಳೆಲ್ಲಾ ಮೂಡುಬಿದಿರೆ ಶೊರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ,ರೆನ್ಸಿ ಮುಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
