ಬೈಂದೂರಿನ ಜೆ.ಎನ್. ಆರ್.ಕಲಾಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಸಂಪಿಗೆಯ ಸಾನ್ವಿ ಆರ್.ನಾಯ್ಕ್ ಗೆ ಚಿನ್ನ ಹಾಗೂ ಕಂಚಿನ ಪದಕ ಲಭಿಸಿದೆ.
ಕುಮಿಟೆಯಲ್ಲಿ ಚಿನ್ನದ ಪದಕ ಹಾಗೂ ಕತದಲ್ಲಿ ಕಂಚಿನ ಪದಕ ಪಡೆದಿರುವ ಸಾನ್ವಿ ಮೂಡುಬಿದಿರೆಯ ಶೋರಿನ್ ರಿಯೂ ಸಂಸ್ಥೆಯ ಮುಖ್ಯ ಶಿಕ್ಷಕ, ರೆನ್ಸಿ ಮುಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ.
ಈಕೆ ಮೂಡುಬಿದಿರೆ ಸಂಪಿಗೆ ನಿವಾಸಿ, ಬಂಟ್ವಾಳದಲ್ಲಿ ಅಬಕಾರಿ ಉಪನಿರೀಕ್ಷಕರಾಗಿರುವ ರಾಜ ನಾಯ್ಕ್-ಜಯಲಕ್ಷ್ಮಿ ದಂಪತಿಯ ಪುತ್ರಿ.
