ಬೈಂದೂರ್ ನಲ್ಲಿ ದಿನಾಂಕ 4.ಮತ್ತು 5 ಜನವರಿ 2025 ರಂದು ಜೆ ಎನ್ ಆರ್ ಕಲಾಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡಬಿದ್ರೆಯಶೋರಿನ್ ರಿಯೂ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.
ಮೈಲಾರಿ ಚಿನ್ನದ ಪದಕ ಕಟ ಹಾಗೂ ಕುಮಿಟೆಯಲ್ಲಿ, ಸೊಹಬೀರ್ ಚಿನ್ನದ ಪದಕ ಕಟ ಹಾಗೂ ಕುಮಿಟೆಯಲ್ಲಿ, ದೀಕ್ಷನ್ ದೇವಾಡಿಗ ಚಿನ್ನದ ಪದಕ ಕುಮಿಟೆಯಲ್ಲಿ ಹಾಗೂ ಕಂಚಿನ ಪದಕ ಕತದಲ್ಲಿ, ಸಂವಿ ಆರ್ ನೈಕ್ ಚಿನ್ನದ ಪದಕ ಕುಮಿಟೆಯಲ್ಲಿ ಹಾಗೂ ಕಂಚಿನ ಪದಕ ಕತದಲ್ಲಿ ಪಡೆದಿದ್ದಾರೆ.
ಇವರು ಶೋರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ರೆನ್ಸಿ ಮೊಹಮ್ಮದ್ ನದೀಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ
