Latest News

ನೆಲ್ಲಿಕಾರು ಸೊಸೈಟಿ ಎಲೆಕ್ಷನ್: ಹರೀಶ್ ಆಚಾರ್ಯ, ರುಕ್ಕಯ್ಯ ಪೂಜಾರಿ, ಫ್ರೆಡ್ರಿಕ್ ಪಿಂಟೊ, ಧನಂಜಯ ಆಳ್ವ,ಅಶ್ವಥ್ ಪಣಪಿಲ ಸಹಿತ ಹಲವರು ಸ್ಪರ್ಧಾಕಣದಲ್ಲಿ

Picture of Namma Bedra

Namma Bedra

Bureau Report

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಜ.14 ಮಂಗಳವಾರದಂದು ನಡೆಯಲಿದ್ದು ನೆಲ್ಲಿಕಾರು ಪಂಚಾಯತ್ ಮಾಜಿ ಅಧ್ಯಕ್ಷ, ನೆಲ್ಲಿಕಾರು ಪರಿಸರದ ಜನಪ್ರಿಯ ನಾಯಕ ಹರೀಶ್ ಆಚಾರ್ಯ ಸಹಿತ ಕೆಲವು ಘಟಾನುಘಟಿ ನಾಯಕರು ಸ್ಪರ್ಧಾಕಣದಲ್ಲಿದ್ದಾರೆ.


ಸಾಮಾನ್ಯ ಕ್ಷೇತ್ರಕ್ಕೆ ಮಥಾಯಿಸ್ ರಾಡ್ರಿಗಸ್,ವಿಜಯ ಕುಮಾರ್,ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಧನಂಜಯ ಆಳ್ವ, ಶಿರ್ತಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್, ಫ್ರೆಡ್ರಿಕ್ ಪಿಂಟೊ ಹಾಗೂ ಸದಾನಂದ ಪೂಜಾರಿ ಅವರು ಸ್ಪರ್ಧಾಕಣದಲ್ಲಿದ್ದರೆ ಸಾಲಗಾರರಲ್ಲದ ಕ್ಷೇತ್ರದಲ್ಲಿ ಹರೀಶ್ ಆಚಾರ್ಯ ಮತ್ತು ಅಶ್ವಥ್ ಪಣಪಿಲ ಅವರ ನಡುವೆ ಸ್ಪರ್ಧೆಯಿದೆ.


ಹಿಂದುಳಿದ ವರ್ಗ ಕ್ಷೇತ್ರದಲ್ಲಿ ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಹಾಗೂ ಪುರುಷೋತ್ತಮ ಅವರ ನಡುವೆ ಸ್ಪರ್ಧೆಯಿದ್ದರೆ ಮಹಿಳಾ ಮೀಸಲು ಕ್ಷೇತ್ರದಲ್ಲಿ ಲಲಿತಾ, ವಾಲ್ಪಾಡಿ ಪಂಚಾಯತ್ ಸದಸ್ಯೆ ವೈಶಾಲಿ,ಪ್ರೀತಿ ಹಾಗೂ ಲಕ್ಷ್ಮೀ ಅವರು ಸ್ಪರ್ಧಾಕಣದಲ್ಲಿದ್ದಾರೆ.


ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಆರು ಮಂದಿ ಹಾಗೂ ತಾ.ಪಂ.ಸದಸ್ಯರಾಗಿ ಸೇವೆ ಸಲ್ಲಿಸಿ ಜನಪ್ರಿಯತೆ ಹೊಂದಿರುವ ರುಕ್ಕಯ್ಯ ಪೂಜಾರಿ ಅವರು ಕೂಡ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಪ್ರಯತ್ನದಲ್ಲಿದ್ದಾರೆ.
ಇನ್ನೂ ಕುತೂಹಲವೆಂದರೆ ಮಂದಿನ ಎಂ.ಎಲ್.ಎ ಕ್ಯಾಂಡೇಟ್ ಎಂದು ಈಗಾಗಲೇ ಪ್ರಚಾರದಲ್ಲಿರುವ ಅಶ್ವಥ್ ಪಣಪಿಲ ಮತ್ತು ನೆಲ್ಲಿಕಾರಿನ ಹೀರೋ ಹರೀಶ್ ಆಚಾರ್ಯ ಅವರ ನಡುವಿನ ಸ್ಪರ್ಧೆ. ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ.ಹಾಗಾಗಿ ಈ ಸ್ಪರ್ಧಾಕಣ ಕುತೂಹಲ ಕೆರಳಿಸಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು