Latest News

ನನ್ನ ಕೈಯಿಂದ ಹಕ್ಕುಪತ್ರ ಕೊಡಲು ಬಿಡದ ಕಾಂಗ್ರೆಸ್ ‘ಹಸ್ತ’ಕ್ಷೇಪ ಮಾಡಿದೆ: ಕೋಟ್ಯಾನ್

Picture of Namma Bedra

Namma Bedra

Bureau Report

ಕ್ಷೇತ್ರದ ಶಾಸಕನಾಗಿ ಸುಮಾರು 310 ಮಂದಿಗೆ ಹಕ್ಕುಪತ್ರ ನೀಡಬೇಕೆಂದು ಮಂಗಳವಾರಕ್ಕೆ ದಿನ ನಿಗದಿಪಡಿಸಿದ್ದೆ,ಇದಕ್ಕಾಗಿ ಐದಾರು ತಿಂಗಳು ಅಧಿಕಾರಿಗಳಲ್ಲಿ ಚರ್ಚಿಸಿ ಕೆಲಸ ಮಾಡಿದ್ದೆ ,ಆದರೆ ಇದನ್ನರಿತ ಕಾಂಗ್ರೆಸ್ ನವರು ರಾಜಕೀಯ ಮಾಡಲೆಂದೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಹಕ್ಕುಪತ್ರ ನೀಡಲು ನಿರ್ಧರಿಸಿದ್ದಾರೆ,ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುತ್ತಿದ್ದು ಅವರ ಕೈಯಿಂದಲೇ ಕೊಡಿಸುವ ಸಿದ್ಧತೆ ಮಾಡಿದ್ದಾರೆ,ಆ ದಿನ ನಾನು ಇರುವುದಿಲ್ಲ,ನನ್ನ ಕ್ಷೇತ್ರದ ಬಡಜನರಿಗೆ ಹಕ್ಕುಪತ್ರಗಳನ್ನು ನನ್ನ ಕೈಯಿಂದಲೇ ನೀಡಬೇಕೆನ್ನುವ ನನ್ನ ಇಚ್ಚೆ ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ‘ಹಸ್ತ’ಕ್ಷೇಪ ಮಾಡುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಆರೋಪಿಸಿದ್ದಾರೆ.
ಇಂದು ಅವರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ನೀಡಬೇಕು,ಬಡಜನರಿಗೆ ಅದೊಂದು ದೊಡ್ಡ ಆಸ್ತಿ ಇದ್ದಂತೆ,ಎಲ್ಲರೂ ಸಂತೋಷದಿಂದ ಇರಬೇಕೆಂದು ಕಳೆದ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದೆ,ಕಾಂಗ್ರೆಸ್ ನವರು ಉಸ್ತುವಾರಿ ಸಚಿವರಿಂದ ಕೊಡಿಸುತ್ತಾರೆ ಎನ್ನುವ ವಿಚಾರ ತಹಶಿಲ್ದಾರ್ ಅವರಿಂದ ತಿಳಿದು ಬಂತು ‘ ಎಂದು ಹೇಳಿದರು.
ಈ ಹಸ್ತಕ್ಷೇಪದಲ್ಲಿ ಮಾಜಿ ಸಚಿವರಾದ ಅಭಯಚಂದ್ರರವರ ಪಾತ್ರವಿಲ್ಲ,ಅವರೆಂದೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವವರಲ್ಲ,ಶಾಸಕನ ಕರ್ತವ್ಯ ಏನು,ಕೆಲಸವೇನು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ, ಕಳೆದ ಎರಡು ಅವಧಿಗಳಿಂದ ಅವರು ನನಗೆ ಸದಾ ಪ್ರೋತ್ಸಾಹ, ಸಲಹೆಗಳನ್ನು ನೀಡುತ್ತಿದ್ದಾರೆ ಎಂದ ಅವರು ಇದರಲ್ಲಿ ಕಾಂಗ್ರೆಸ್ ನ ಬೇರೆ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಳೆದ ಅವಧಿಯಲ್ಲಿ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ,ಆದರೆ ಈಬಾರಿ ಸರಕಾರ ಯಾವುದೇ ಅನುದಾನ ನೀಡುತ್ತಿಲ್ಲ,ರಸ್ತೆ ರಿಪೇರಿಗೆಂದು ಒಂದೈದು ಲಕ್ಷ ಬೇಕಾದರೂ ಸರಕಾರದಿಂದ ಸಿಗುತ್ತಿಲ್ಲವೆಂದು ಹೇಳಿದ ಅವರು, ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕೀಯ ಮಾಡಿದವನಲ್ಲ,ಕಾಂಗ್ರೆಸ್ ನವರೂ ಅಭಿವೃದ್ಧಿ ವಿಚಾರದಲ್ಲಿ ಅಡ್ಡ ಬರಬಾರದೆಂದು ಹೇಳಿದರು.
ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖಂಡರಾದ ಶಾಂತಿಪ್ರಸಾದ್ ಹೆಗ್ಡೆ, ರಂಜಿತ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು