ಮೂಡುಬಿದಿರೆ ಪುರಸಭಾ ಮಾರ್ಕೆಟ್ ನಲ್ಲಿ ದಿನವಹಿ ಸುಂಕ ವಸೂಲಿ ಗುತ್ತಿಗೆ ವಹಿಸಿಕೊಂಡವರು ಕೆಲ ವ್ಯಾಪಾರಿಗಳಿಂದ ಅಧಿಕ ಸುಂಕ ವಸೂಲಿ ಮಾಡುತ್ತಾ ಗೂಂಡಾಗಿರಿಗಿಳಿದಿದ್ದು ಇಂತಹ ಗೂಂಡಾಗಿರಿಗೆ ಮೂಡುಬಿದಿರೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಮತ್ತು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಎಚ್ಚರಿಸಿದ್ದಾರೆ.
ಮೂಡುಬಿದಿರೆ ಮಾರ್ಕೆಟ್ ನ ದಿನವಹಿ ಸುಂಕ ವಸೂಲಿ ಗುತ್ತಿಗೆ ಈಬಾರಿ ಹೊಸಬರಿಗೆ ಸಿಕ್ಕಿದೆ,ಅವರು ಇನ್ಯಾರನ್ನೋ ಕಳುಹಿಸಿ ಬಡ ವ್ಯಾಪಾರಿಗಳಿಂದ ಹೆಚ್ಚು ಸುಂಕ ವಸೂಲಿ ಮಾಡುತ್ತಿರುವುದು ಮತ್ತು ಕೊಡದಿದ್ದಲ್ಲಿ ಜೇಬಿಗೆ ಕೈಹಾಕಿ ವಸೂಲಿ ಮಾಡಿ ಗೂಂಡಾ ಪ್ರವೃತ್ತಿ ಮೆರೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಈ ಬಗ್ಗೆ ವ್ಯಾಪಾರಿಗಳು ನಮ್ಮಲ್ಲಿ ದೂರು ನೀಡಿದ್ದು ಅವರಿಗೆ ನಾವು ಧೈರ್ಯ ನೀಡಿದ್ದೇವೆ,ಅಲ್ಲದೆ ಪೊಲೀಸರಿಗೆ ದೂರು ನೀಡಲು ಹೇಳಿದ್ದೇವೆ, ಪೊಲೀಸರು ಮತ್ತು ಪುರಸಭಾ ಅಧಿಕಾರಿವರ್ಹದವರು ಇಂತಹ ಗೂಂಡಾಗಿರಿ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ನಮ್ಮ ಸರಕಾರ ಅಧಿಕಾರದಲ್ಲಿದೆ,ಈ ಸರಕಾರದಲ್ಲಿ ಯಾವ ವ್ಯಾಪಾರಿಗಳಿಗೂ, ಜನರಿಗೂ ಅನ್ಯಾಯವಾಗಲು ಬಿಡುವುದಿಲ್ಲ,ಸಾರ್ವಜನಿಕವಾಗಿ ಶಾಂತಿಭಂಗವನ್ನುಂಟುಮಾಡಿ ಗೂಂಡಾಗಿರಿ ನಡೆಸುವ ಯಾರೇ ಆಗಲಿ,ಅಂತರವನ್ನು ಗಡಿಪಾರು ಮಾಡಲೂ ಕ್ರಮಕೈಗೊಳ್ಳಲಾಗುವುದೆಂದು ಅಭಯಚಂದ್ರ ಮತ್ತು ಮಿಥುನ್ ರೈ ಅವರು ಎಚ್ಚರಿಸಿದ್ದಾರೆ.
