ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.
ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪತ್ರಕರ್ತ ಎಚ್.ಮುಹಮ್ಮದ್ ವೇಣೂರು ಅವರು ಖತೀಬರಿಗೆ ಶುಭಹಾರೈಸಿದರು.
ಖಾಲಿದ್ ಪೂಲಬೆ,ವೈದ್ಯ.ಸಲೀಮ್ ಗರ್ಡಾಡಿ,ಅಬ್ದುಲ್ ರಹ್ಮಾನ್ ಕಟ್ಟೆ,ರಫೀಕ್ ಪಡ್ಡ,ಮಹಮೂದ್ ಪಿ.ಜೆ,ಅಬ್ದುಸ್ಸಲಾಮ್ ಕೇಶವನಗರ,ನಝೀರ್ ಪೆರಿಂಜೆ,ಕೆ.ಪಿ.ಬಶೀರ್,ಪೆರಿಂಜೆ ಮದರಸ ಅಧ್ಯಾಪಕ ಮುಹಮ್ಮದ್ ಅಲ್ತಾಫ್, ಶಬೀರ್ ಕಟ್ಟೆ, ಶಬೀರ್ ಪಡ್ಡ ಮತ್ತಿತರರು ಉಪಸ್ಥಿತರಿದ್ದರು.
