ನೆಲ್ಲಿಕಾರು ವ್ಯ.ಸೇ.ಸ.ಸಂಘದ ನಿರ್ದೇಶಕರಾಗಿ ಚುನಾಯಿತರಾದ ರುಕ್ಕಯ್ಯ ಪೂಜಾರಿ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿಗೆ ಆಯ್ಕೆಯಾಗಿರುವ ವಿಘ್ನೇಶ್ ಶೆಟ್ಟಿ ಅಳಿಯೂರು ಅವರನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಮೂಡುಬಿದಿರೆ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಮುಖರಾದ ಹರ್ಷವರ್ಧನ ಪಡಿವಾಳ್,ಪುರಂದರ ದೇವಾಡಿಗ,ಸುರೇಶ್ ಪ್ರಭು,ಕೊರಗಪ್ಪ,ರಮೇಶ್ ಶೆಟ್ಟಿ,ಶಿವಾನಂದ ಪಾಂಡ್ರು,ಸುಕುಮಾರ್ ಜೈನ್ ಅಳಿಯೂರು,ಗಣೇಶ್ ಮೂಡುಕೊಣಾಜೆ, ಪ್ರದೀಪ್ ಇರುವೈಲ್, ಪ್ರವೀಣ್ ಇರುವೈಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
