ಮರೋಡಿ ಪರಿಸರದಲ್ಲಿ ಸಾಕಷ್ಟು ಜನಪ್ರಿಯರಾಗಿ, ಸರ್ವಧರ್ಮೀಯರ ಪ್ರೀತಿಗೆ ಪಾತ್ರರಾಗಿ,ಅಬ್ಸಾಲಿಯಾಕ ಎಂದೇ ಚಿರಪರಿಚಿತರಾಗಿದ್ದ ಅಬುಸ್ವಾಲಿಹ್ ಅವರು ಬುಧವಾರ ನಿಧನರಾದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರೂ, ಕಾಶಿಪಟ್ಣ ದಾರುನ್ನೂರ್ ಸಂಸ್ಥೆಯ ಪಿ.ಟಿ.ಎ.ಅಧ್ಯಕ್ಷರೂ ಆದ ಫಕೀರಬ್ಬ ಮಾಸ್ಟರ್ ಅವರ ತಂದೆಯಾಗಿರುವ ಅಬ್ಸಾಲಿಯಾಕ ಅವರು ಮರೋಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದರು.
ಮರೋಡಿಯಲ್ಲಿ ಸುದೀರ್ಘ ವರ್ಷಗಳಲ್ಲಿ ಅಂಗಡಿ ವ್ಯಾಪಾರದ ಮೂಲಕ ಜನಪ್ರಿಯರಾಗಿದ್ದ ಅವರು ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
