ಲಾಡಿ ಹಜಂಕಾಲಬೆಟ್ಟು ದೈವಸ್ಥಾನಕ್ಕೆ ಅಮೃತ ನಿರ್ಮಲ ನಗರ ಯೋಜನೆಯಡಿಯಲ್ಲಿ 9.50 ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಿಸಿಕೊಟ್ಟ ಪುರಸಭಾ ಸದಸ್ಯ ಸುರೇಶ್ ಪ್ರಭು ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಮಾರೂರು ಖಂಡಿಗ ರಾಮದಾಸ ಅಸ್ರಣ್ಣ,ಧರ್ಮದರ್ಶಿ ವೃಷಭರಾಜ ಬಲ್ಲಾಳ್, ಶ್ರೀ ಕ್ಷೇತ್ರ ಹಜಂಕಾಲಬೆಟ್ಟ ಸೇವಾ ಸಮಿತಿ ಅಧ್ಯಕ್ಷ ಈಶ್ವರ್ ಪೂಜಾರಿ, ಕೋಶಾಧಿಕಾರಿ ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ರಾವ್,ಪೊನ್ನೆಚಾರಿಗುತ್ತು ಪೃಥ್ವಿರಾಜ್ ಜೈನ್,ಲಾಡಿಗುತ್ತು ಪಾರ್ಶ್ವನಾಥ ಜೈನ್,ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
