Latest News

ಹರಿಪ್ರಸಾದ್ ಅಗಲುವಿಕೆ ಇಡೀ ಸಮಾಜಕ್ಕೆ ನಷ್ಟ: ಶಂಕರ್ ಕೋಟ್ಯಾನ್

Picture of Namma Bedra

Namma Bedra

Bureau Report

ಹೊಸಂಗಡಿಯ ಜನಪ್ರಿಯ ನಾಯಕ ಹರಿಪ್ರಸಾದ್ ಅವರ ಅಗಲುವಿಕೆಯ ನೋವು ಸಹಿಸಿಕೊಳ್ಳಲಾಗುತ್ತಿಲ್ಲ, ಅವರ ಅಗಲುವಿಕೆ ಇಡೀ ಸಮಾಜಕ್ಕೆ ನಷ್ಟ ಎಂದು ಮೂಡುಬಿದಿರೆ ಶ್ರೀ ಗುರುನಾರಾಯಣ ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಅವರು ಹೇಳಿದರು.
ಮೂಡುಬಿದಿರೆ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಹರಿಪ್ರಸಾದ್ ಅವರಿಗೆ ಸಲ್ಲಿಸಲಾದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ.ಅವರು ಮಾತನಾಡಿ ‘ ಹರಿಪ್ರಸಾದ್ ಅವರು ತನ್ನ ಕಾಲೇಜು ಜೀವನದಿಂದಲೇ ಸಮಾಜ ಸೇವೆ ಪ್ರಾರಂಭಿಸಿದವರು,ಗಾಂಧೀಜಿಯವರ ರಾಮರಾಜ್ಯದ ಕನಸು ಕಂಡವರು,ನಾರಾಯಣ ಗುರು,ಅಂಬೇಡ್ಕರ್ ಅವರ ತತ್ವ, ಸಂದೇಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ದೀನ ದಲಿತರ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದವರು, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಂಚಾಯತ್ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ದೊರಕಲು ಕಾರಣೀಕರ್ತರಾಹಿದ್ದರು ‘ ಎಂದರು.
ಯುವವಾಹಿನಿ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಕಾರ್ಯದರ್ಶಿ ವಿನೀತ್ ಸುವರ್ಣ, ಮಾಜಿ ಅಧ್ಯಕ್ಷರಾದ ಸುಶಾಂತ್ ಕರ್ಕೇರ,ನವಾನಂದ, ನಿ.ಪೂ.ಕಾರ್ಯದರ್ಶಿ ಗಿರೀಶ್ ಕೋಟ್ಯಾನ್,ಉಪಾಧ್ಯಕ್ಷ ವಿದೇಶ್ , ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು