Latest News

ಬೆಳುವಾಯಿ: ಬ್ಲಾಸಮ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ, ಬ್ಲಾಸಮ್ ಟವರ್ ಉದ್ಘಾಟನೆ

Picture of Namma Bedra

Namma Bedra

Bureau Report

ಬೆಳುವಾಯಿಯ ಬ್ಲಾಸಮ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರಂಭ ಮತ್ತು ಬ್ಲಾಸಮ್ ಟವರ್ ನ ಉದ್ಘಾಟನಾ ಸಮಾರಂಭವು ಶುಕ್ರವಾರ ಮತ್ತು ಶನಿವಾರದಂದು ನಡೆಯಿತು.
ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಅವರು ವಹಿಸಿದ್ದರು.
ನೂತನ ಕಟ್ಟಡ ‘ ಬ್ಲಾಸಮ್ ಟವರ್’ನ್ನು ಶ್ರೀಮತಿ ಹಿಲ್ಡಾ ಮಸ್ಕರೇನಸ್ ಅವರು ಉದ್ಘಾಟಿಸಿದರು.
ಬೆಳುವಾಯಿ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಜೋಸೆಫ್ ಕರ್ಡೋಝ ಅವರು ಆಶೀರ್ವಚನ ನೀಡಿದ್ದು ಸಂಪಿಗೆ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮೈಸೂರು ಇ.ಎಸ್.ಐ ಕೋರ್ಟ್ ನ ಜಿಲ್ಲಾ ನ್ಯಾಯಾಧೀಶರಾದ ರುಡಾಲ್ಫ್ ಪಿರೇರ ,ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಂಶುಪಾಲರಾದ ಪೀಟರ್ ಫರ್ನಾಂಡೀಸ್ ಹಾಗೂ ಉದ್ಯಮಿ ಮುಹಮ್ಮದ್ ಅನ್ಸಾರ್ ಬೆಳುವಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟಿ ಜಾಯ್ಲಿನ್ ಡಿಸೋಜ ಅವರು ಸ್ವಾಗತಿಸಿದರು. ಬ್ಲಾಸಮ್ ಶಾಲೆಯ ಸ್ಥಾಪಕ,ಸಂಚಾಲಕ ಸೈಮನ್ ಮಸ್ಕರೇನಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ ಸಂಸ್ಥೆ ಬೆಳೆದು ಬಂದ ಹಾದಿ,ಪಟ್ಟ ಶ್ರಮ, ಫಲಿತಾಂಶ ದ ಬಗ್ಗೆ ಹಾಗೂ ಶಾಲೆಯ ಯಶಸ್ಸಿಗೆ ಸಹಕರಿಸಿದ ಶಿಕ್ಷಕರು,ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದವರ್ಗದವರ ಶ್ರಮ’ವನ್ನು ನೆನಪಿಸಿದರು.
ಟ್ರಸಟಿಗಳಾದ ಮ್ಯಾಥ್ಯು ಮಸ್ಕರೇನಸ್, ಸಿಮಾಕ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು