ಮೂಡುಬಿದಿರೆ: ದ.ಕ ಹಾಲು ಉತ್ಪಾದಕರ ಒಕ್ಕೂಟದ ಪ್ರಶಸ್ತಿ ಪುರಸ್ಕೃತ ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ದಯಾನಂದ ಪೈ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಬೇಂಗುರಿ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಮೇಶ್ ಪಿ. ಶೆಟ್ಟಿ, ಜಯಂತ ಪೂಜಾರಿ, ನಮಿರಾಜ್ ಪಿ.ಬಲ್ಲಾಳ್, ಪಾರ್ಶ್ವನಾಥ್ ಜೈನ್, ಪ್ರವೀಣ್ ಕುಮಾರ್, ಲಲಿತಾ ಮೂಲ್ಯ, ಜಯಂತಿ, ಗೀತಾ ಆರ್. ಪೂಜಾರಿ ಹಾಗೂ ಕರ್ಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
