ಮೂಡುಬಿದಿರೆಯ ಲಾವಂತಬೆಟ್ಟು ರಸ್ತೆಯ ದ್ವಿಚಕ್ರ ವಾಹನಗಳು ಮಾತ್ರ ಓಡಾಡುವ ಓಣಿಯ ರಸ್ತೆಗೆ ಪುರಸಭಾ ನಾಮನಿರ್ದೇಶಿತ ಸದಸ್ಯ ಕ್ಲಾರಿಯೋ ಸುಸ್ಮಿತ್ ಡಿಸೋಜ ಮತ್ತು ಅವರ ಕಚೇರಿ ಸಿಬ್ಬಂದಿ ಸುಮಿತ್ ಅವರು ಸಿಮೆಂಟ್ ಬ್ಲಾಕ್ ಹಾಗೂ ಮಣ್ಣು ಹಾಕಿ ದುರಸ್ತಿಗೊಳಿಸುವ ಮೂಲಕ ಸಾಮಾಜಿಕ ಸೇವೆಯನ್ನು ಹೀಗೂ ಮಾಡಬಹುದೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಅಲ್ಲೊಂದು ಚಿಕ್ಕದಾದ ದ್ವಿಚಕ್ರವಾಹನಗಳು ಮಾತ್ರ ಹೋಗುವಷ್ಟು ಅಗಲದ ಓಣಿ ರಸ್ತೆ ಇದೆ.ಆ ರಸ್ತೆ ನಡುವೆ ಗುಂಡಿಬಿದ್ದು ದ್ವಿಚಕ್ರ ವಾಹನಗಳ ಓಡಾಟಕ್ಕೆ ಅಡಚಣೆಯಾಗಿತ್ತು. ಅಲ್ಲದೆ ಇತ್ತೀಚೆಗೆ ಮಹಳೆಯೋರ್ವರು ಮತ್ತು ವಿದ್ಯಾರ್ಥಿಯೊಬ್ಬ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯ ಮಾಡಿಕೊಂಡಿದ್ದರು.
ದಿನಂಪ್ರತಿ ಈ ರಸ್ತೆಯಲ್ಲಿ ಹಲವು ದ್ವಿಚಕ್ರವಾಹನಗಳು ಓಡಾಡಿದರೂ ತಮ್ಮ ಬೈಕ್ ನ ಎಕ್ಸಲೇಟರ್ ಹಾಗೂ ಬ್ರೇಕ್ ನ ಮೇಲೆ ಮಾತ್ರ ಗಮನಕೊಟ್ಟರೇ ವಿನಹ ರಿಪೇರಿ ಮಾಡಬಹುದೆಂದು ಮಂಡೆಗೆ ಹೋಗಲೇ ಇಲ್ಲ. ‘ ನಂಕ್ ದಾಯೆ,ಬೋಡಾಂಡ ಮಲ್ಪುವೆರ್’ ಎಂಬ ಯೋಚನೆ ಇದ್ದಿರಲೂಬಹುದು.
ಆದರೆ ಇದನ್ನೆಲ್ಲಾ ಗಮನಿಸಿದ ಪುರಸಭಾ ನಾಮನಿರ್ದೇಶಿತ ಸದಸ್ಯ ಕ್ಲಾರಿಯೋ ಅವರು ಯಾರಿಗೂ ಕಾಯದೆ ತನ್ನ ಕಚೇರಿಯ ಸಿಬ್ಬಂದಿ ಸುಮಿತ್ ಅವರ ಜತೆಗೂಡಿ ಸಿಮೆಂಟ್ ಬ್ಲಾಕ್ ತರಿಸಿ ,ಮಣ್ಣು ಹಾಕಿ ತಾವೇ ದುರಸ್ತಿಪಡಿಸುವ ಮೂಲಕ ಮಾದರಿಯಾಗಿದ್ದಾರೆ.
