Latest News

ಮೂಡುಬಿದಿರೆಯಲ್ಲಿ ‘ತನ್ಹಾ’ ಸೌಂದಯ೯ವಧ೯ಕ ಚಿಕಿತ್ಸಾ ಕೇಂದ್ರ ಆರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆ: ತಾಲೂಕಿನ ಮಹಾವೀರ ಕಾಲೇಜು ಬಳಿ ” ತನ್ಹಾ’ ಎಂಬ ಹೆಸರಿನ ಸೌಂದಯ೯ವಧ೯ಕ ಚಿಕಿತ್ಸಾ ಕೇಂದ್ರವು ಭಾನುವಾರ ಆರಂಭಗೊಂಡಿತು.
ನೂತನವಾಗಿ ಆರಂಭಗೊಂಡ ಕ್ಲಿನಿಕ್ ನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿ ಮಾತನಾಡಿ ರೋಗಿಗಳು ಬಂದಾಗ ಅವರ ಸಮಸ್ಯೆಗಳನ್ನು ಆಲಿಸಿ ಮತ್ತು ಎರಡು ನಿಮಿಷ ಅವರ ಬಳಿ ಡಾಕ್ಟರ್ ಮಾತನಾಡಿದರೆ ಆಗ ಶೇ.50ರಷ್ಟು ರೋಗಗಳು ಗುಣಮುಖವಾಗುತ್ತದೆ.
ಯಾರು ತಮ್ಮಲ್ಲಿಗೆ ಸಮಸ್ಯೆಗಳೊಂದಿಗೆ ಬರುವರೋ ಅವರೇ ನಿಮಗೆ ಗುರುಗಳು. ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ನೀಡಿ ಮತ್ತು ಸರಿಯಾದ ಮಾಹಿತಿಯನ್ನು ನೀಡಿ. ನೂತನವಾಗಿ ಆರಂಭಿಸಿರುವ ಚಿಕಿತ್ಸಾ ಕೇಂದ್ರದಲ್ಲಿ ಉತ್ತಮ ಸೇವೆಯನ್ನು ನೀಡುವ ಮೂಲಕ ಜಯಶೀಲರಾಗಿ ಹಾಗೂ ಸೌಂದಯ೯ಕ್ಕೆ ಸಂಬಂಧಿಸಿದ ತ್ವಚೆಯ ರೋಗಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವಂತ್ತಾಗಲಿ ಮತ್ತು ಕಷ್ಟದಲ್ಲಿ ಬರುವವರಿಗೆ ಸ್ಥೈರ್ಯವನ್ನು ತುಂಬುವಂತಹ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು.
ವೈದ್ಯರಾದ ಡಾ. ಕೃಷ್ಣರಾಜ ಭಟ್, ಡಾ. ಜಯಗೋಪಾಲ್ ತೋಳ್ಪಾಡಿ, ಸಿ. ಹೆಚ್. ಮೆಡಿಕಲ್ ನ ಸಿ. ಹೆಚ್. ಗಫೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಕ್ಲಿನಿಕ್ ನ ಡಾ.ಆಯೇಷಾ ಪ್ರಾಸ್ತಾವಿಕವಾಗಿ ಮಾತನಾಡಿ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿ ವಂದಿಸಿದರು. ಆಯೇಷಾ ಅವರ ತಂದೆ ಹೆಚ್. ಬಿ. ಸುಲೇಮಾನ್ ಈ ಸಂದಭ೯ದಲ್ಲಿದ್ದರು.
ಸೌಮ್ಯ ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು