ಮೂಡುಬಿದಿರೆಯ ಅಲಂಗಾರು ಟಿ.ವಿ.ಎಸ್.ಶೋ ರೂಮ್ ಹತ್ತಿರ ಹಾಕಲಾಗಿರುವ ದುಬೈ ಅಂಡರ್ ವಾಟರ್ ,ಫಿಶ್ ಟನಲ್ ಮತ್ತು ರೋಬೆಟಿಕ್ಸ್ ಬರ್ಡ್ಸ್ ,ಅಮ್ಯೂಸ್ಮೆಂಟ್ ಮತ್ತು ವಸ್ತು ಪ್ರದರ್ಶನ ‘ ಬೆದ್ರ ಉತ್ಸವ’ ವನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಅವರು ಶುಕ್ರವಾರ ಸಂಜೆ ಉದ್ಘಾಟಿಸಿ ಶುಭ ಹಾರೈಸಿದರು.

ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯ ಪಿ.ಕೆ.ಥೋಮಸ್, ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಅಬ್ದುಸ್ಸಲಾಮ್ ಬೂಟ್ ಬಝಾರ್, ಉಸ್ಮಾನ್ ಸೂರಿಂಜೆ,ರಝಾಕ್ ಸಚ್ಚರಿಪೇಟೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಸಂತೋಷ್ ಶೆಟ್ಟಿ ಕೊಡಂಗಲ್ಲು,ಗೋಪಾಲ ಶೆಟ್ಟಿಗಾರ್ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಅಮ್ಯೂಸ್ಮೆಂಟ್ ನ ಮುಖ್ಯಸ್ಥರಾದ ನಾಸಿರ್ ಕಾವಳಕಟ್ಟೆ,ಹೈದರ್ ಕಾವಳಕಟ್ಟೆ,ಫಾರೂಕ್ ಮೂಡುಬಿದಿರೆ, ಇಲ್ಯಾಸ್ ಕಾವಳಕಟ್ಟೆ,ಶೌಕತ್ ಮೂಡುಬಿದಿರೆ, ಜೋಸೆಫ್, ಅರ್ಫ್ರಾಝ್ ಮತ್ತಿತರರು ಉಪಸ್ಥಿತರಿದ್ದರು.