ಬೆದ್ರ ಬಸ್ಟಾಂಡಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಅಂಗಡಿ ಕೋಣೆಗಳ ಏಲಂ ಇತ್ತೀಚೆಗೆ ನಡೆದಿದೆ. ಕಳೆದ ಹಲವು ವರ್ಷಗಳಿಂದ ಬ್ಯಾರ ಮಾಡುತ್ತಿದ್ದ ಕೆಲವರು ಬಾಡಿಗೆ ಕಟ್ಟಲು ಪುರೆಸದೆ, ಬಿಡ್ಡಿಂಗ್ ಗೆ ಕಾಂಪಿಟೀಷನ್ ನೀಡಲು ಸಾಧ್ಯವಾಗದೆ ತಮ್ಮ ಅಂಗಡಿಗಳನ್ನು ಕಳೆದುಕೊಂಡಿದ್ದಾರೆ. ಹಾಗೆ ಕಳೆದುಕೊಂಡ ಪೈಕಿ ಜಯಲಕ್ಷ್ಮಿ ಹೊಟೇಲ್ ಕೂಡಾ ಒಂದು.
ಅಷ್ಟು ದೊಡ್ಡ ವಿಶಾಲವಾದ ಬಸ್ಟಾಂಡಲ್ಲಿ ಸಸ್ಯಾಹಾರಿ ಹೊಟೇಲ್ ಅಂತ ಇದ್ದದ್ದು ಅದೊಂದೇ. ಶುಚಿ -ರುಚಿಯ ವಿಷಯ ಬೇಡ, ಆದರೆ ಬಸ್ಟಾಂಡಲ್ಲಿ ಹೊಟೇಲ್ ಅಂತ ಇದ್ದದ್ದು ಅದೊಂದೆ. ಇನ್ನು ಆ ಹೊಟೇಲ್ ಆ ಜಾಗದಲ್ಲಿ ಕಾಣಸಿಗುವುದಿಲ್ಲ. ಹೊಟೇಲ್ ನ ಎಲ್ಲ ಐಟಂಗಳೂ ಫೆ.5 ರ ಬುಧವಾರ ಖಾಲಿಯಾಗಿದೆ.
ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಈ ಸಂಕೀರ್ಣದ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯಲ್ಲಿ ಹೆಚ್ಚಿನ ಅಂಗಡಿಕೋಣೆಗಳು ಹೈ ಬಿಡ್ಡಿಂಗ್ ಗೆ ಹೋಗಿದೆ. ಹೈ ಅಂದರೆ ಅಷ್ಟು ಬಾಡಿಗೆ ಕಟ್ಟಿ ಪುರೆಸಲಾರದಷ್ಟು. ಆದರೂ ಕೆಲವರು ‘ತಾಂಟಿನೆರ್ದಾವರೆ’ ಕೆಲವರು ಇಷ್ಟು ವರ್ಷ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದವರು ಅಂಗಡಿಗಳನ್ನು ಕಳೆದುಕೊಂಡಿದ್ದಾರೆ.
ಇಷ್ಟು ದೊಡ್ಡ ಸಂಕೀರ್ಣ, ಇಷ್ಟು ದೊಡ್ಡ ಬಸ್ಟಾಂಡ್ ಇರುವಾಗ ಒಂದಾದರೂ ಹೊಟೇಲ್ ಮಾಡಲೇಬೇಕೆಂದು ಪುರಸಭೆಯವರು ಕಂಡೀಷನ್ ಹಾಕಬೇಕಿತ್ತು. ಆದರೆ ಆದಾಯದ ದೃಷ್ಟಿಯೆದುರು ಅದು ಮಂಡೆಗೇ ಹೋಗಿಲ್ಲ.

ಇದೀಗ ದುಬಾರಿ ಬಾಡಿಗೆಗೆ ಅಂಗಡಿಕೋಣೆಗಳನ್ನು ವಹಿಸಿಕೊಂಡವರು ಅದರಲ್ಲಿ ‘ಬಯ್ಯ’ನವರ ದೊಡ್ಡ ಬಟ್ಟೆ ಅಂಗಡಿ ತರೆಯಲು ಚಾನ್ಸ್ ಕೊಟ್ಟಿದ್ದಾರೆನ್ನುವ ಮಾಹಿತಿಯಿದೆ. ಬಯ್ಯನವರ ಒಂದೆರಡು ಬಟ್ಟೆ ಅಂಗಡಿಗಳು ಸದ್ಯಕ್ಕೆ ಬಸ್ಟಾಂಡಲ್ಲಿದೆ. ಫ್ಯಾನ್ಸಿ ಅಂಗಡಿಗಳೂ ಇದ್ದು ಅದು ಕೂಡಾ ಬಯ್ಯನವರದ್ದೇ ಆಗಿದೆ.
ಒಂದುವೇಳೆ ಮತ್ತೆ ಬಟ್ಟೆ ಅಂಗಡಿಯಾದರೆ ಬಸ್ಟಾಂಡಲ್ಲಿ ‘ಬಯ್ಯ ಸಾಮ್ರಾಜ್ಯ’ ಆಗುವುದರಲ್ಲಿ ಯಾವ ಡೌಟೂ ಇಲ್ಲ.
ಎಲ್ಲಿಂದಲೋ ಬಂದವರಿಗೆ ಅದೆಷ್ಟು ದೊಡ್ಡ ಬಾಡಿಗೆ ಕೊಟ್ಟು ವ್ಯಾಪಾರ ಮಾಡಲು ಪುರೆಸುವುದು ಅವರಿಗೆ ಮಾತ್ರ. ಯಾಕೆಂದರೆ ಅವರು ಒಂದು ಅರ್ಧ ಚಾ ಕೂಡಾ ಇಲ್ಲಿನವರ ಹೊಟೆಲ್ ನಿಂದ ಕುಡಿಯುವವರಲ್ಲ, ಎಲ್ಲವನ್ನೂ ಮನೆಯಿಂದಲೇ ಮಾಡಿ ತರುತ್ತಾರೆ. ಇಲ್ಲಿನ ಲೋಕಲ್ ಹುಡುಗ-ಹುಡುಗಿಯರಿಗೆ ಕೆಲಸ ಕೊಡಲ್ಲ. ತಮ್ಮ ಮೂಲಸ್ಥಾನದಿಂದಲೇ ತರಿಸುತ್ತಾರೆ. ಅದಿರಲಿ- ಅದು ಅವರಿಗೆ ಬಿಟ್ಟದ್ದು. ವಿಷಯ ಅದಲ್ಲ, ಎಷ್ಟು ಬಾಡಿಗೆ ಆದರೂ ಬಯ್ಯನವರು ಕೊಡ್ತಾರೆ ಎಂಬ ಧೈರ್ಯ ಇಲ್ಲಿನ ಅಂಗಡಿಕೋಣೆಗಳನ್ನು ವಹಿಸಿಕೊಂಡವರಿಗಿದೆ. ಆ ಧೈರ್ಯದಿಂದಲೇ ವಹಿಸಿಕೊಂಡದ್ದು.
ಬಸ್ಟಾಂಡಿನಲ್ಲೊಂದು ಶುದ್ಧ ಸಸ್ಯಾಹಾರಿ ಹೊಟೇಲ್ ಬೇಕೇ ಬೇಕು. ಇದರಿಂದ ಇಲ್ಲಿಗೆ ಬರುವ ಅದೆಷ್ಟೋ ಜನರಿಗೆ, ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಟ್ಟೆ ಅಂಗಡಿಯನ್ನೇ ದೊಡ್ಡದು ಮಾಡಲು ಹೋದರೆ ಹೊಟ್ಟೆ ತುಂಬುತ್ತದಾ?
ಈ ‘ಹೈ’ ಬಿಡ್ಡಿಂಗ್ ಹಿಂದೆ ಬಯ್ಯ ಒಬ್ಬನ ಕೈವಾಡವಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಈಗಾಗಲೇ ಸಣ್ಣ ಬಟ್ಟೆ ಅಂಗಡಿ ಇಟ್ಟುಕೊಂಡಿರುವ ಆತ ಇಲ್ಲಿನ ವ್ಯಕ್ತಿಯೊಬ್ಬರನ್ನು ಹಿಡ್ಕೊಂಡು ಅವರಲ್ಲಿ ಬಿಡ್ಡಿಂಗ್ ಏರಿಸಿ ಆ ಕೋಣೆ ತನಗೇ ಸಿಗಬೇಕೆಂದು ಏಲಂ ಮುಂಚೆಯೇ ಸ್ಕೆಚ್ ಹಾಕಿಕೊಂಡಿದ್ದ ಎನ್ನುವ ಗುಸುಗುಸು ಕೂಡಾ ಬೆದ್ರ ಬಸ್ಟಾಂಡಲ್ಲಿ ಹಬ್ಬಿಕೊಂಡಿದೆ.
ವಿಷಯ ದಾದ ಬೋಡಾಂಡ ಇರಲಿ, ಬೆದ್ರ ಬಸ್ಟಾಂಡಲ್ಲೊಂದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಹೊಟೇಲ್ ಉದ್ಘಾಟನೆಯಾಗುವಂತೆ ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಪುರಸಭೆಯವರದ್ದು.
ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನನ್ನು ಅದೆಲ್ಲೋ ಟೆಂಪೊ ಪಾರ್ಕ್ ಬಳಿ ಮಾಡುವುದಕ್ಕಿಂತ ಪುರಸಭೆಯ ಈ ಬಿಲ್ಡಿಂಗಲ್ಲೇ ಮಾಡಲು ಆರಂಭದಲ್ಲೇ ಮನಸ್ಸು ಮಾಡುತ್ತಿದ್ದರೆ ಅದೆಷ್ಟೋ ಬಡ ಜನರಿಗೆ, ಬಸ್ ಸಿಬ್ಬಂದಿಗಳಿಗೆ ತುಂಬಾ ದೊಡ್ಡ ಉಪಕಾರವಾಗುತ್ತಿತ್ತು.
ದಿನಂಪ್ರತಿ ಒಲ್ತೊಲ್ತಕ್ಲೋ ಬರುವಾಗ ಇಲ್ಲೊಂದು ಹೊಟೇಲ್ ಇಲ್ಲದಿದ್ದರೆ ಅದು ಪುರಸಭೆಗೇ ಶೇಮ್ ಹೊರತೇ ಬಯ್ಯದ ಪೊರ್ತು ಒಟ್ಟು ಸೇರುವ ಬಯ್ಯನವರಿಗಲ್ಲ!