ಮುಹಿಯುದ್ದೀನ್ ಜುಮ್ಮಾ ಮಸೀದಿ,ಅಂಗರಕರಿಯ ಇದರ ಅಧೀನದಲ್ಲಿರುವ ನವೀಕೃತ ಮಸೀದಿ ಬದ್ರಿಯಾ ಮಸ್ಜಿದ್ ಹಾಗೂ ಮದರಸ,ಬದ್ರಿಯಾ ನಗರ,ಪುಲಾಬೆ ಇದರ ಉದ್ಘಾಟನಾ ಸಮಾರಂಭವು ಫೆ.10 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ದ.ಕ.ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಲ್ ಹಾಜ್ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ನವೀಕೃತ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ಅಲ್ ಹಾಜ್ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಬಾಅಲವಿ ಸಾದಾತ್ ತಂಙಳ್ ಅವರು ವಕ್ಫ್ ನೇತೃತ್ವ ನೀಡಲಿದ್ದು ಸೌದಿ ಅರೇಬಿಯಾ ಅಲ್ ಹಸಾದ ಪುರಸಭಾ ಮಾಜಿ ಅಧ್ಯಕ್ಷ ಆದಿಲ್ ಅಲ್ ಮುಲ್ಹಿಮ್ ಅವರು ನಾಮಫಲಕವನ್ನು ಅನಾವರಣಗೊಳಿಸಲಿದ್ದಾರೆ.
ಇರ್ಷಾದ್ ದಾರಿಮಿ ಮಿತ್ತಬೈಲು,ಮಂಗಳೂರು ಎಸ್ಎಂಆರ್ ಗ್ರೂಪ್ ನ ಎಸ್.ಎಂ.ರಶೀದ್ ಹಾಜಿ,ಹೈದರ್ ಆಲಿ ಮಂಗಳೂರು ,ಶರಫುದ್ದೀನ್ ತಂಙಳ್ ಪಡ್ಡಂದಡ್ಕ,ಹಾಜಿ ಅಬೂಬಕ್ಕರ್ ಸಿದ್ದೀಕ್ ದಾರಿಮಿ,ಮೂಡುಬಿದಿರೆ, ಹಾಜಿ ಖಾಸಿಂ ಮದನಿ ಕರಾಯ,ಹಾಜಿ ಕೆ.ಎಂ.ಉಮರ್ ಸಖಾಫಿ ಕಾಜೂರು,ಹಾಜಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಹಾಜಿ ಜಿ.ಎಂ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಆತೂರು,ಹಾಜಿ ಅಬ್ದುರ್ರಝಾಕ್ ಮದನಿ ವಳವೂರು,ರಫೀಕ್ ಸಖಾಫಿ ವಾಮಂಜೂರು ಮುಂತಾದ ಧಾರ್ಮಿಕ ನೇತಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.6 ರ ಸಂಜೆ 4 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು ಅಂಗರಕರಿಯ ಮಸೀದಿಯ ಖತೀಬರಾದ ಸಯ್ಯದ್ ಅಕ್ರಮ್ ಅಲೀ ತಂಙಳ್ ಅವರ ನೇತೃತ್ವದಲ್ಲಿ ಅಂಗರಕರಿಯ ಮಸೀದಿ ಕಮಿಟಿಯ ಅಧ್ಯಕ್ಷರಾದ ಹಾಜಿ ಜಿ.ಎಂ.ನಜೀಮುದ್ದೀನ್ ಅವರು ಧ್ವಜಾರೋಹಣಗೈಯಲಿದ್ದಾರೆ.
ಮಸೀದಿ ಉದ್ಘಾಟನೆ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಮತಪ್ರಭಾಷಣ ನಡೆಯಲಿದ್ದು ಫೆ.6 ರಂದು ಇಶಾ ನಮಾಝ್ ಬಳಿಕ ಖಾಸಿಮ್ ದಾರಿಮಿ ನಂದಾವರ,ಫೆ.7 ರಂದು ಯಾಸಿರ್ ಸಖಾಫಿ ಅಲ್ ಅಝ್ಹರಿ ಮಲಪ್ಪುರಂ,ಫೆ.8 ರಂದು ಅಲ್ ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ,ಮಂಗಳೂರು ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.
ಫೆ.9 ರಂದು ಸಂಜೆ 7 ಕ್ಕೆ ಸೌಹಾರ್ದ ಸಂಗಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್,ಶಾಸಕ ಹರೀಶ್ ಪೂಂಜಾ,ಜೀವಂಧರ ಕುಮಾರ್ ಪಡ್ಯಾರಬೆಟ್ಟ,ಮಾಜಿ ಸಚಿವರಾದ ರಮಾನಾಥ ರೈ,ಕೆ.ಅಭಯಚಂದ್ರ, ಕೆ.ಹರೀಶ್ ಕುಮಾರ್, ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಕಕ್ಕಿಂಜೆ,ಅರವಿಂದ ಚೊಕ್ಕಾಡಿ,ಕೆ.ಕೆ.ಶಾಹುಲ್ ಹಮೀದ್, ರಕ್ಷಿತ್ ಶಿವರಾಂ, ಕೆ.ಧರಣೇಂದ್ರ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ವೀರಪ್ಪ ಮಡಿವಾಳ, ಆನಂದ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ ಹಾಗೂ ಸಂಜೀವ ಮೂಲ್ಯ ಗೌರವ ಸನ್ಮಾನ ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಮುಹಮ್ಮದ್ ಕುಂಞಿ ಅಂಗರಕರಿಯ, ಅಬೂಬಕ್ಕರ್ ಅಂಗರಕರಿಯ, ಉಮರಬ್ಬ ಬಲ್ಲಂಗೇರಿ ಹಾಗೂ ಅಬ್ದುರ್ರಹ್ಮಾನ್ ಹೊಕ್ಕಾಡಿ ಅವರನ್ನು ಸನ್ಮಾನಿಸಲಾಗುವುದೆಂದು ಮಸೀದಿ ಕಮಿಟಿಯ ಅಧ್ಯಕ್ಷರಾದ ಹಾಜಿ ಜಿ.ಎಂ.ನಜೀಮುದ್ದೀನ್ ಅವರು ತಿಳಿಸಿದ್ದಾರೆ.
