ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ವರಿ ವಸೂಲಿನ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ.
ಕಳೆದ ಡಿಸೆಂಬರ್ 20 ರಂದು ನಡೆದಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ನಿಡ್ಡೋಡಿಯ ಸುಂದರ ಪೂಜಾರಿ ಅವರು ಅತೀ ಹೆಚ್ಚು ಬಿಡ್ಡು ( 42,00,350) + 7,56,073 ( 18% ಜಿ.ಎಸ್.ಟಿ)ದಾರರಾಗಿ ವರಿವಸೂಲಿನ ಹಕ್ಕನ್ನು ಪಡೆದಿದ್ದರು.
ಆದರೆ ಸುಂಕ ವಸೂಲಿ ವಿಚಾರದಲ್ಲಿ ಆಗಾಗ ಗಲಾಟೆಯಾಗಿರುವುದರಿಂದ ಮತ್ತು ಫೆ.10 ರಂದು ಅನಧಿಕೃತವಾಗಿ ಬೊಂಡದ ಹಕ್ಕನ್ನು ಇರಿಸಿರುವ ಹಿನ್ನೆಲೆಯಲ್ಲಿ ಪುನಃ ಸಂಘರ್ಷ ಉಂಟಾಗಿರುತ್ತದೆ ಹಾಗೂ ಏಲಂ ಶರ್ತದ ಪ್ರಕಾರ ಬಿಡ್ಡಿನ ಪೂರ್ಣ ಮೊತ್ತವನ್ನು ಏಕಗಂಟಿನಲ್ಲಿ ಪಾವತಿಸದೆ ಇರುವುದರಿಂದ ಈ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
