Latest News

ಪುರಸಭೆಯ ಪೌರಕಾಮಿ೯ಕೆ ಆತ್ಮಹತ್ಯೆ

Picture of Namma Bedra

Namma Bedra

Bureau Report

ಮೂಡುಬಿದಿರೆ : ಇಲ್ಲಿನ ಪುರಸಭೆಯ ಪೌರ ಕಾಮಿ೯ಕೆಯೋವ೯ರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭಾ ವ್ಯಾಪ್ತಿಯ ಬಿರಾವಿನಲ್ಲಿ ಮಂಗಳವಾರ ನಡೆದಿದೆ.
ಬಿರಾವು ಅರಂತ ಕಂಪೌಂಡ್ ನ ನಿವಾಸಿ ದಿ. ಚಂದ್ರಹಾಸ್ ಅವರ ಪತ್ನಿ ಯಶೋಧ (43ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಕಳೆದ ಕೆಲವು ವರುಷಗಳಿಂದ ಪೌರಕಾಮಿ೯ಕೆಯಾಗಿ ಪುರಸಭೆಯಲ್ಲಿ ದುಡಿಯುತ್ತಿದ್ದು ಎರಡು ವಷ೯ಗಳ ಹಿಂದೆ ಹುದ್ದೆ ಖಾಯಂ ಆಗಿತ್ತು.
ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಓವ೯ ಕಾಲೇಜು ಶಿಕ್ಷಣ ಪಡೆಯುತ್ತಿದ್ದು ಮತ್ತೋವ೯ ಮಂಗಳೂರಿನಲ್ಲಿದ್ದಾನೆಂದು ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಸಾಲದ ಬಾಧೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು