Latest News

ಗುತ್ತಿಗೆದಾರ ಜಯ ಮೇಸ್ತ್ರಿ ಇನ್ನಿಲ್ಲ

Picture of Namma Bedra

Namma Bedra

Bureau Report

ಜಯ ಮೇಸ್ತ್ರಿ ಎಂದೇ ಮೂಡುಬಿದಿರೆ ಪರಿಸರದಲ್ಲಿ ಖ್ಯಾತರಾಗಿದ್ದ ಸಂಪಿಗೆ ಕೋಂಟಡ್ಕ ನಿವಾಸಿ ಜಯ ಗೌಡ (68) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಮೂಡುಬಿದಿರೆಯ ಪ್ರಸಿದ್ಧ ಕಟ್ಟಡಗಳ ಹಾಗೂ ಹಲವಾರು ಖ್ಯಾತನಾಮರ ಮನೆಗಳ ಕೆಲಸಗಳನ್ನು ಪ್ರಸ್ತುತ ದಿನಗಳಂತೆ ಇಂಜಿನಿಯರ್ ಗಳ ವ್ಯವಸ್ಥೆ ಇಲ್ಲದ ದಿನಗಳಲ್ಲಿ ತನ್ನ ಅನುಭವದ ಮೂಲಕವೇ ನಿರ್ಮಾಣ ಮಾಡಿ ಜನಮನ್ನಣೆಗಳಿಸಿದ್ದ ಜಯ ಗೌಡ ಅವರು ಜಯ ಮೇಸ್ತ್ರಿ ಎಂದೇ ಖ್ಯಾತರಾಗಿದ್ದರು.
ಇತ್ತೀಚೆಗೆ ಮೂಡುಬಿದಿರೆ ಕನ್ನಡಭವನದಲ್ಲಿ ನಡೆದಿದ್ದ
‘ತುಳುವೆರ್ ಬೆದ್ರ’ ಸಂಘಟನೆಯ ನಾಟಕ ಪ್ರದರ್ಶನ ವೇಳೆ ಜಯ ಮೇಸ್ತ್ರಿ ಅವರನ್ನು ಸನ್ಮಾನಿಸಲಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು