ವಿವಿಧ ರೀತಿಯ ನೃತ್ಯ ತರಬೇತಿ ಮೂಲಕ ಮೂಡುಬಿದಿರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಎಂ.ಜೆ.ಸ್ಟೆಪ್ ಅಪ್ ನೃತ್ಯ ತರಬೇತಿ ಕೇಂದ್ರದ ಶಿರ್ತಾಡಿ ಶಾಖೆ ನಾಳೆ ಬೆಳಿಗ್ಗೆ 10-30 ಕ್ಕೆ ಶಿರ್ತಾಡಿಯ ಬ್ರಹ್ಮ ರೆಸಿಡೆನ್ಸಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಮೂಡುಬಿದಿರೆ ಧನಲಕ್ಷ್ಮಿ ಕ್ಯಾಶ್ಯೂ ಮಾಲಕರಾಗಿರುವ ಕೆ.ಶ್ರೀಪತಿ ಭಟ್ ಹಾಗೂ ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಗ್ನೆಸ್ ಡಿಸೋಜ ಅವರು ಡ್ಯಾನ್ಸ್ ಸ್ಟುಡಿಯೋ ವನ್ನು ಉದ್ಘಾಟಿಸಲಿದ್ದಾರೆ.
ಶಿರ್ತಾಡಿ ಚರ್ಚ್ ನ ಧರ್ಮಗುರುಗಳಾದ ಹೆರಾಲ್ಡ್ ಮಸ್ಕರೇನಸ್ ಅವರು ಆಶೀರ್ವಚನ ನೀಡಲಿದ್ದು ಕರಾವಳಿ ಕರ್ನಾಟಕದ ಡ್ಯಾನ್ಸ್ ಯೂನಿಯನ್ ಅಧ್ಯಕ್ಷರಾದ ಲಕ್ಷ್ಮೀಶ್ ಶೆಟ್ಟಿ ,ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಬ್ರಹ್ಮ ರೆಸಿಡೆನ್ಸಿ ಮಾಲಕ ಸತೀಶ್ ವಿ.ಶೆಟ್ಟಿ, ಜಾನ್ ಡಿಸೋಜ, ಡಾ.ಕೆ.ಕೃಷ್ಣರಾಜ್, ಡಾ.ಆಶೀರ್ವಾದ್,ವಿನೋಭ್ ಕುಮಾರ್ ಕೇಳ,ಪತ್ರಕರ್ತ ಅಶ್ರಫ್ ವಾಲ್ಪಾಡಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಅನೀಶ್ ಎಂ.ಜೆ.ಅವರು ತಿಳಿಸಿದ್ದಾರೆ.
