ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಉಪನಿರೀಕ್ಷಕರಾಗಿದ್ದ ಸಿದ್ದಪ್ಪ ನರನೂರ ಅವರು ಉಳ್ಳಾಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು ಮೂಡುಬಿದಿರೆ ಠಾಣೆಗೆ ಹೊಸ ಎಸ್.ಐ ಆಗಿ ಪ್ರತಿಭಾ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಬೆಳಗಾಂ ಮೂಲದವರಾದ ಸಿದ್ದಪ್ಪ ಅವರು ಪ್ರೊಬೆಷನರಿ ಎಸ್.ಐ.ಆಗಿ ಬಂದಿದ್ದು ಬಳಿಕ ಎಸ್.ಐ.ಆಗಿ ನೇಮಕಗೊಂಡು ಮೂಡುಬಿದಿರೆಯಲ್ಲಿ ಸೇವೆ ಸಲ್ಲಿಸಿದ್ದರು.ಕೆಲ ಸಮಯ ಬರ್ಕೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಮತ್ತೆ ಮೂಡುಬಿದಿರೆಗೆ ಬಂದಿದ್ದರು.
ಮೂಡುಬಿದಿರೆಯಲ್ಲಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದಿದ್ದ ಸಿದ್ದಪ್ಪ ಅವರು ಇದೀಗ ಉಳ್ಳಾಲ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಪಾಂಡೇಶ್ವರ ಠಾಣೆಯಲ್ಲಿ ಎಸ್.ಐ.ಆಗಿದ್ದ ಪ್ರತಿಭಾ ಅವರು ಮೂಡುಬಿದಿರೆಯ ಹೊಸ ಎಸ್.ಐ.ಆಗಿ ಅಧಿಕಾರ ಸ್ಬೀಕರಿಸಿದ್ದಾರೆ.
ಪ್ರತಿಭಾ ಅವರು ತುಮಕೂರು ಮೂಲದವರಾಗಿದ್ದಾರೆ.
