Latest News

ಸುಧಾಕರ ಅವರ ಚಿಕಿತ್ಸೆಗೆ ನೆರವಾದ ಶಿರ್ತಾಡಿ ಚರ್ಚ್ ನ ಹೆಲ್ಪಿಂಗ್ ಹ್ಯಾಂಡ್ಸ್

Picture of Namma Bedra

Namma Bedra

Bureau Report

ಶಿರ್ತಾಡಿಯ ಸುಧಾಕರ ಎನ್ನುವ ಚಾಲಕರೋರ್ವರು ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆ ಸೇರಿದ್ದರು.ಬಡ ಕುಟುಂಬ, ದೊಡ್ಡ ಮೊತ್ತದ ಆಸ್ಪತ್ರೆ ಬಿಲ್ ಪಾವತಿಸಲು ಅಸಾಧ್ಯವಾಗಿತ್ತು.


ಈ ವಿಷಯ ಶಿರ್ತಾಡಿ ಚರ್ಚ್ ನ ಹೆಲ್ಪಿಂಗ್ ಹ್ಯಾಂಡ್ಸ್ ನವರ ಗಮನಕ್ಕೆ ಬಂದ ಕೂಡಲೇ ಭಾನುವಾರದ ಪೂಜೆ ಮುಗಿಸಿ ಚರ್ಚ್ ಹೊರಗಡೆ ಬಾಕ್ಸ್ ಹಿಡಿದು ಕಲೆಕ್ಷನ್ ಮಾಡಿದ್ದಾರೆ.ತಮ್ಮಿಂದ ಏನಾದರೂ ಬಡ ಕುಟುಂಬಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮಾಡಿದ ಈ ಕಾರ್ಯದಲ್ಲಿ ಸಂಗ್ರಹವಾದದ್ದು ಸುಮಾರು 45 ಸಾವಿರ ರೂ.ಗಳು.
ಸಂಹ್ರಹವಾದ 45 ಸಾವಿರವನ್ನು ಹ್ಯುಮಾನಿಟಿ ಸಂಸ್ಥೆಗೆ ನೀಡಿದ್ದಾರೆ. ಅವರು ಅದಕ್ಕೆ 25 ಸಾವಿರ ಸೇರಿಸಿ 70 ಸಾವಿರ ಮಾಡಿ ಸುಧಾಕರ ಅವರ ಚಿಕಿತ್ಸಾ ವೆಚ್ಚಕ್ಕೆ ನೀಡಿ ನೆರವಾಗಿದ್ದಾರೆ. ಹೆಲ್ಪಿಂಗ್ ಹ್ಯಾಂಡ್ಸ್ ನ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸುಧಾಕರ ಅವರ ಕುಟುಂಬ ಈ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಅಲ್ಲದೆ ಶಿರ್ತಾಡಿಯ ಸೌಹಾರ್ದ ಫ್ರೆಂಡ್ಸ್ ನವರು ಕೂಡಾ ಸುಧಾಕರ ಅವರ ಚಿಕಿತ್ಸಾ ವೆಚ್ಚಕ್ಕೆ ನೆರವಾಗಿದ್ದಾರೆಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು