ಮೂಡುಬಿದಿರೆ: ನಮ್ಮ ನಮ್ಮ ಕತ೯ವ್ಯ ಮಾಡುವಾಗ ಸ್ಥಾನಮಾನ, ಅಧಿಕಾರ ಮತ್ತು ಸಂಶಯ ಪಡದೆ ಶ್ರದ್ಧೆಯಿಂದ ಮಾಡಿದಾಗ ನಂಬಿದ ದೈವ ದೇವರು ಆಶೀರ್ವಾದ ಮಾಡುತ್ತಾರೆ ಎಂದು ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನ (ನಾಗಬ್ರಹ್ಮ ಸ್ಥಾನ) ಲಾಡಿ ಮೂಡುಬಿದಿರೆ ಇದರ ನೂತನ ಶಿಲಾಮಯ ದೇವಳದ ಅನಾವರಣ ಹಾಗೂ ಬ್ರಹ್ಮಕಲಶೋತ್ಸವದ ಧಾಮಿ೯ಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮನಿಗೆ ಎಲ್ಲಿಯೂ ದೇವಸ್ಥಾನವಿಲ್ಲ.ಆದರೆ ಇಲ್ಲಿ ಅಪರೂಪದ ಬ್ರಹ್ಮಸ್ಥಾನವನ್ನು ನಿಮಿ೯ಸಿ ಎಲ್ಲರಿಗೂ ಅನುಗ್ರಹ ಸಿಗುವಂತೆ ಮಾಡಿರುವುದು ಈ ಕ್ಷೇತ್ರದ ವಿಶೇಷ. ಸೃಷ್ಠಿ ಮಾಡುವುದು ಸುಲಭ ಆದರೆ ಅದನ್ನು ರಕ್ಷಣೆ ಮಾಡುವುದು ಕಷ್ಟ ಆದರೆ ಇಲ್ಲಿನ ದೇವಸ್ಥಾನವನ್ನು ಶ್ರದ್ಧೆ, ಏಕಾಗ್ರತೆ, ಭಕ್ತಿ ಮತ್ತು ಉತ್ಸಾಹದಿಂದ ಶಾಶ್ವತವಾಗಿ ನಿಮಿ೯ಸಲಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ದೇವರು ಎಲ್ಲಾ ಕಡೆ ಇದ್ದಾನೆ. ಆತನನ್ನು ನೋಡುವ ನೇರವಾಗಿ ನೋಡುವ ಭಾಗ್ಯ ಕಷ್ಟವಾದುದರಿಂದ
ಸಂಪಕ೯ ಸಾಧಿಸುವ ಕೊಂಡಿಬೇಕು. ಅದಕ್ಕಾಗಿ ದೇವರ ಪ್ರತಿಮೆ. ಅದು ಇರಲು ಸುಂದರವಾದ ಗಭ೯ಗುಡಿ ಬೇಕು. ಅಲ್ಲಿ ನ್ಯೂನ್ಯತೆಗಳಿಲ್ಲದೆ ಸುಸಜ್ಜಿತವಾಗಿದ್ದರೆ ಮಾತ್ರ ದೇವರ ಶಕ್ತಿ ಹೆಚ್ಚಾಗಲು ಸಾಧ್ಯವಿದೆ ಎಂದು ನುಡಿದ ಅವರು ಭಕ್ತರು ದೇವಾಲಯಗಳನ್ನು ಜೀಣೋ೯ದ್ಧಾರ ಮಾಡುತ್ತಿದ್ದಾರೆ ಇದರ ಜತೆಗೆ ನಮ್ಮ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ತುಂಬಿಸುವ ಕೆಲಸಗಳಾಗಬೇಕಿದೆ ಎಂದರು.
ಎಡಪದವು ಮುರಳೀಧರ ತಂತ್ರಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಶಿಲ್ಪಿ ಪದ್ಮನಾಭ, ಬಾಗಿಲು ನಿಮಿ೯ಸಿರುವ ನಾಗೇಂದ್ರ ಆಚಾರ್ ಅವರನ್ನು ಗೌರವಿಸಲಾಯಿತು.
ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಮಾಜಿ ಸಚಿವ ಕೆ. ಅಭಯಚಂದ್ರ, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಪುರಸಭೆ ಸದಸ್ಯ ಎಚ್. ಸುರೇಶ್ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ವಾಗತ ಸಮಿತಿಯ ಸದಸ್ಯ ಸುದಶ೯ನ ಎಂ. ಸ್ವಾಗತಿಸಿದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಯ ಅನಂತಕೃಷ್ಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕತ೯ ಎಂ. ಗಣೇಶ್ ಕಾಮತ್ ಕಾಯ೯ಕ್ರಮ ನಿರೂಪಿಸಿದರು.ವ್ಯವಸ್ಥಾಪನಾ ಸಮಿತಿಯ ಕಾಯ೯ದಶಿ೯ ರವಿ ಪ್ರಸಾದ್ ಕೆ.ಶೆಟ್ಟಿ ವಂದಿಸಿದರು.
ನಂತರ ಮೂಡುಬಿದಿರೆಯ ಯಕ್ಷಕೃಷ್ಣ ಬಳಗದವರಿಂದ ಯಕ್ಷ ಗಾನ ಪ್ರದರ್ಶನಗೊಂಡಿತು.
