ಮೂಡುಬಿದಿರೆಯ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಕ್ಲಾಸ್ ಸಂಸ್ಥೆಯ ಶಿರ್ತಾಡಿ ಶಾಖೆಯನ್ನು ಬ್ರಹ್ಮ ರೆಸಿಡೆನ್ಸಿಯಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿಸೋಜ ಅವರು ಉದ್ಘಾಟಿಸಿದರು.
ಶಿರ್ತಾಡಿ ಪರಿಸರದಲ್ಲಿ ಡ್ಯಾನ್ಸ್ ಕ್ಲಾಸ್ ವ್ಯವಸ್ಥೆ ಈವರೆಗಿರಲಿಲ್ಲ.ಆ ವ್ಯವಸ್ಥೆ ಇದೀಗ ಪ್ರಾರಂಭಗೊಂಡಿರುವುದರಿಂದ ಈಭಾಗದ ಮಕ್ಕಳಿಗೆ ಅನುಕೂಲವಾಗಿದೆ.
ಶಿರ್ತಾಡಿ ಚರ್ಚ್ ಧರ್ಮಗುರುಗಳಾದ ರೆ.ಫಾ.ಹೆರಾಲ್ಡ್ ಮಸ್ಕರೇನಸ್ ಅವರು ಆಶೀರ್ವಚನ ನೀಡಿದರು.
ಬ್ರಹ್ಮ ರೆಸಿಡೆನ್ಸಿ ಮಾಲಕ ಸತೀಶ್ ವಿ.ಶೆಟ್ಟಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಸಿನೆಮಾ ಫೈಟ್ ಮಾಸ್ಟರ್ ಸಂತೋಷ್ ರಾಥೋಡ್, ಶಿಕ್ಷಕ ಮಹಾದೇವ ಮೂಡುಕೊಣಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಸಂಸ್ಥೆಯ ಮುಖ್ಯಸ್ಥ ಅನೀಶ್ ಎಂ.ಜೆ.ಅವರು ಭಾಗವಹಿಸಿದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನೀಶ್ ಅವರ ತಂದೆ ಸುರೇಂದ್ರನ್, ತಾಯಿ ರಮಣಿ,ಸಹೋದರ ಸುಧೀಶ್ ಮತ್ತಿತರರು ಉಪಸ್ಥಿತರಿದ್ದರು. ರಿಷಾಂಕ್ ತೋಡಾರ್ ಕಾರ್ಯಕ್ರಮ ನಿರೂಪಿಸಿದರು.
