ಚಾ,ಕಾಫಿ, ಬರ್ಗರ್,ಪಿಝ್ಝಾ,ಶವರ್ಮ,ಜ್ಯೂಸ್,ಚಾಟ್ಸ್ ಮುಂತಾದ ಐಟಮ್ ಗಳನ್ನೊಳಗೊಂಡ ನೂತನ ಉಪಹಾರ ಕೇಂದ್ರ ‘ ಬೆದ್ರ ಕೆಫೆ’ ಇದರ ಉದ್ಘಾಟನೆ ನಾಳೆ ಸಂಜೆ 4-30 ಕ್ಕೆ ಮೂಡುಬಿದಿರೆಯ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ.

ವಿನೂತನ ಶೈಲಿಯ ಪರಿಕಲ್ಪನೆಯ ಈ ಬೆದ್ರ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಂ.ಮೋಹನ ಆಳ್ವ,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ, ಮಿಥುನ್ ರೈ, ಪುರಸಭಾ ಮುಖ್ಯಾಧಿಕಾರಿ ಇಂದು ಎಮ್, ವಿನ್ಸೆಂಟ್ ಕುಟಿನ್ಹ, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಡಾ.ವಿನಯ ಪ್ರಸಾದ್,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಸಿ.ಎಚ್.ಅಬ್ದುಲ್ ಗಫೂರ್, ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಶಕುಂತಲಾ ಹರೀಶ್ ಹಾಗೂ ರಾಜೇಶ್ ನಾಯ್ಕ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕೆ.ಟಿ.ಖ್ಯಾತಿಯ ಕಲ್ಲಡ್ಕದ ಹೊಟೇಲ್ ಲಕ್ಷ್ಮೀ ಗಣೇಶ್ ನ ರಾಜೇಂದ್ರ ಹೊಳ್ಳ ಅವರನ್ನು ಸನ್ಮಾನಿಸಲಾಗುವುದೆಂದು ಬೆದ್ರ ಕೆಫೆಯ ಮಾಲಕ ಹನೀಫ್ ರಹ್ಮಾನಿಯಾ ಅವರು ತಿಳಿಸಿದ್ದಾರೆ.