ಈಗಾಗಲೇ ಮಂಗಳೂರು- ಮೂಡುಬಿದಿರೆ-ಕಾರ್ಕಳ ರಸ್ತೆಗೆ ಸರಕಾರಿ ಬಸ್ ಸೇವೆ ಪ್ರಾರಂಭಗೊಳ್ಳುವಲ್ಲಿ ಹೋರಾಟದ ಮೂಲಕ ಪ್ರಮುಖ ಪಾತ್ರ ವಹಿಸಿದ್ದ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರ ಮತ್ತೊಂದು ಹೋರಾಟಕ್ಕೆ ಶೀಘ್ರದಲ್ಲೇ ಜಯ ಸಿಗುವ ನಿರೀಕ್ಷೆಯಿದೆ.
ಮೂಡುಬಿದಿರೆಯಿಂದ ನಾರಾವಿ ಹಾಗೂ ಬಿ.ಸಿ.ರೋಡ್ ರಸ್ತೆಗೆ ಸರಕಾರಿ ಬಸ್ ಸೇವೆ ಪ್ರಾರಂಭಿಸಬೇಕೆಂದು ಅರುಣ್ ಕುಮಾರ್ ಶೆಟ್ಟಿ ಆಗ್ರಹಿಸುತ್ತಾ ಬಂದಿದ್ದರು.
ಇಂದು ಮಂಗಳೂರಿನಲ್ಲಿ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸಭೆಯಲ್ಲಿ ಮತ್ತೆ ಈ ಬಗ್ಗೆ ಪ್ರಸ್ತಾಪಿಸಿದ ಅರುಣ್ ಶೆಟ್ಟಿ ಅವರಿಗೆ ಸಂಬಂಧಪಟ್ಟ ಅಧಿಕಾರಿಗಳು ಸಿಹಿ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
ಶೀಘ್ರದಲ್ಲೇ ಈ ರಸ್ತೆಗೆ ಸರಕಾರಿ ಬಸ್ ಸೇವೆ ಪ್ರಾರಂಭಗೊಂಡಲ್ಲಿ ಅರುಣ್ ಅವರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗುತ್ತದೆ.
