ಮೂಡುಬಿದಿರೆಯ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ‘ಬೆದ್ರ ಕೆಫೆ’ ಗುರುವಾರ ಸಂಜೆ ಅದ್ದೂರಿಯಾಗಿ ಶುಭಾರಂಭಗೊಂಡಿದೆ.


ಇದೇ ಸಂದರ್ಭದಲ್ಲಿ ಕೆ.ಟಿ.( ಕಲ್ಲಡ್ಕ ಟೀ) ಎಂದೇ ಖ್ಯಾತರಾಗಿರುವ ಕಲ್ಲಡ್ಕದ ಲಕ್ಷ್ಮೀ ಗಣೇಶ್ ಹೊಟೆಲ್ ಮಾಲಕ ರಾಜೇಂದ್ರ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್,ಆಳ್ವಾಸ್ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ,ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ,ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಉದ್ಯಮಿಗಳಾದ ಅಬುಲಾಲ್ ಪುತ್ತಿಗೆ, ಹಮೀದ್,ಕೆ.ಎ.ಮೊಯ್ದಿನ್,ಅಬ್ದುಸ್ಸಲಾಮ್ ಬೂಟ್ ಬಝಾರ್, ನ್ಯಾಯವಾದಿ ಇರ್ಷಾದ್ ಎನ್.ಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಬೆಳುವಾಯಿ,ಪುರಸಭಾ ನಾಮನಿರ್ದೇಶನ ಸದಸ್ಯ ಅಬ್ದುಲ್ ಲತೀಫ್ , ಜಾವೆದ್ ಹೊಸಂಗಡಿ, ಅಲ್ತಾಫ್ ಚಿಕನ್, ಸಂತೋಷ್ ಶೆಟ್ಟಿ ಮಿಜಾರ್, ಪುರಸಭಾ ಸದಸ್ಯ ಇಕ್ಬಾಲ್ ಕರೀಮ್,ಅಬ್ದುರ್ರಹ್ಮಾನ್(ಅಬ್ಬಾಕ) ಅಬ್ದುರ್ರಹ್ಮಾನ್ ರಹ್ಮಾನಿಯಾ ಮತ್ತಿತರ ಗಣ್ಯರು ಭಾಗವಹಿಸಿ ಶುಭಹಾರೈಸಿದರು.
ಉದ್ಘಾಟನಾ ಸಮಾರಂಭದ ಪ್ರಯುಕ್ತ ಭಾಗವಹಿಸಿದವರಿಗೆ ಉಚಿತವಾಗಿ ಬಿಸಿಬಿಸಿ ಮಾಲ್ಪುರಿ,ಲೈಮ್ ಸೋಡ,ಚಾ ವಿತರಿಸಲಾಯಿತು.ಶುಭಾರಂಭ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು ಬೆದ್ರ ಕೆಫೆ ಹೌಸ್ ಫುಲ್ ಆಗಿತ್ತು.
‘ಬೆದ್ರ ಕೆಫೆ’ ಮುಖ್ಯಸ್ಥ ಹನೀಫ್ ರಹ್ಮಾನಿಯಾ ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.