Latest News

ಬೆದ್ರದ ದಾನಾ ಮಾಲ್ ಈಗ ‘ಸುವರ್ಣ ಸ್ಕ್ವೇರ್ ಶಾಪಿಂಗ್ ಮಾಲ್ ‘ ಆಗಿ ಶುಭಾರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆ ಮಸೀದಿ ಬಳಿ ದಾನಾಮಾಲ್ ಆಗಿ ನಿರ್ಮಾಣಗೊಂಡಿದ್ದ ಬಹುಮಹಡಿಯ ಸುಂದರ ಶಾಪಿಂಗ್ ಮಾಲ್ ಇದೀಗ ಹೊಸ ಆಡಳಿತದೊಂದಿಗೆ ಸುವರ್ಣ ಸ್ಕ್ವೇರ್ ಶಾಪಿಂಗ್ ಮಾಲ್ ಆಗಿ ಶುಕ್ರವಾರ ಶುಭಾರಂಭಗೊಂಡಿದೆ.
ಸುವರ್ಣ ಸ್ಕ್ವೇರ್ ನ ಮುಖ್ಯಸ್ಥ ಮಂಗಳೂರಿನ ಬಾಲಕೃಷ್ಣ ಸುವರ್ಣ ಅವರ ಮಕ್ಕಳಾದ ಜೇಂಕಾರ್ ಕೃಷ್ಣ ಹಾಗೂ ಯುವಿಕಾ ಶ್ರೀಮಾ ಅವರು ಹೊಸ ಆಡಳಿತದ ಮಾಲ್ ಸಂಕೀರ್ಣವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಅವರು ಭಾಗವಹಿಸಿ ಮಾತನಾಡಿ ‘ ಯೋಗ ಮತ್ತು ಯೋಗ್ಯತೆ ಇದ್ದಾಗ ಮಾತ್ರ ಸಲ್ಲಬೇಕಾದದ್ದು ಸಲ್ಲಬೇಕಾದವರಿಗೆ ಸಲ್ಲುತ್ತದೆ, ಬಾಲಕೃಷ್ಣ ಸುರ್ಣರಿಗೆ ಈ ಸುವರ್ಣಾವಕಾಶ ಲಭಿಸಿದೆ,ಈ ಸಂಸ್ಥೆ ಯಶಸ್ಸಾಗಲಿ ‘ ಎಂದು ಹಾರೈಸಿದರು.


ಮಂಗಳೂರು ಮೂಲದ ಮಲೇಶಿಯಾದ ಉದ್ಯಮಿ ಬಿಪಿನ್ ರೈ ಅವರು ಮಾತನಾಡಿ ‘ ಬೆಳೆಯುತ್ತಿರುವ ಮೂಡುಬಿದಿರೆಯಲ್ಲಿ ಈ ಸುಸಜ್ಜಿತ ಮಾಲ್ ಮತ್ತೊಂದು ಗರಿ ಮೂಡಿಸಿದೆ,ಇಲ್ಲಿ ಮಿನಿ ಥಿಯೇಟರ್, ಸ್ಟಾರ್ ಹೊಟೇಲ್ ರೂಪಿಸುವ ಯೋಜನೆಗಳು ಶೀಘ್ರದಲ್ಲೇ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು.
ಉದ್ಯಮಿ, ಸುವರ್ಣ ಸ್ಕ್ವೇರ್ ನ ಮುಖ್ಯಸ್ಥ ಬಾಲಕೃಷ್ಣ ಸುವರ್ಣ ಸರ್ವರ ಸಹಕಾರ ಕೋರಿದರು.


‘ ಏಸ’ ಚಿತ್ರದ ನಿರ್ದೇಶಕ ಉದಯ ಶೆಟ್ಟಿ ಕಾಂತಾವರ,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಚಂದ್ರಹಾಸ ಸನಿಲ್,ಸಂತೋಷ್ ಶೆಟ್ಟಿ ಉದ್ಯಮಿ ಜಬ್ಬಾರ್ ಮಾರಿಪಳ್ಳ,ಅಂಬೋಡಿಮಾರ್ ರಘುನಾಥ್ ದೇವಾಡಿಗ,ಸಂಸ್ಥೆಯ ಕಾನೂನು ಸಲಹೆಗಾರ ,ನ್ಯಾಯವಾದಿ ಮೋಹನ್ ರಾಜ್,ಉದ್ಯಮಿ,ಎಂ.ಎಫ್.ಸಿ.ಚಾಯ್ ಮಾರ್ಟ್ ನ ಸಿದ್ದೀಕ್ ಮಂಗಳೂರು ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಶ್ರೀಮತಿ ಸುಪ್ರಿತಾ ಬಿ.ಸುವರ್ಣ, ಮಾತೃಶ್ರೀ ನೀಲಮ್ಮ ಜಿನ್ನಪ್ಪ ಪೂಜಾರಿ, ಬೆಳ್ತಂಗಡಿ ಮದ್ದಡ್ಕದ ಜಯರಾಮ ಸಾಲ್ಯಾನ್, ಪ್ರೇಮಾ ಜೆ.ಸಾಲ್ಯಾನ್ , ಸಂಸ್ಥೆಯ ಆಡಳಿತ ವರ್ಗ,ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮನು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು