ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ 30 ನಿಮಿಷಗಳ ಕಟಾ ಮಾಡಿ ವಿಶ್ವದಾಖಲೆ ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಮೂಡುಬಿದಿರೆಯ ಕರಾಟೆಪಟು ಸರ್ಫ್ರಾಝ್ ಅವರನ್ನು ಬೆದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು.
ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಅಶ್ರಫ್ ಎಂ.ಎಸ್.ಸಿ, ಪಿ.ಹೆಚ್.ಮುಹಮ್ಮದ್ ಹುಸೈನ್, ಆಯೋಜಕರಾದ ನೌಫಲ್ ಬೆದ್ರ, ಇರ್ಫಾನ್ ಬೆದ್ರ ಮೀಡಿಯಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಫೀಝ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು.
