Latest News

ವಾಲ್ಪಾಡಿಯಲ್ಲಿ 3 ನೇ ವಾರ್ಷಿಕ ಮಜ್ಲಿಸುನ್ನೂರ್

Picture of Namma Bedra

Namma Bedra

Bureau Report

ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ವಾಲ್ಪಾಡಿ ಶಾಖೆಯ ವತಿಯಿಂದ ಮೂರನೇ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ವಾಲ್ಪಾಡಿ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ದುವಾಶೀರ್ವಾದದೊಂದಿಗೆ ಭಾನುವಾರ ರಾತ್ರಿ ನಡೆಯಿತು.


ಎನ್.ಪಿ.ಎಂ.ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಅವರು ಮಜ್ಲಿಸುನ್ನೂರ್ ನೇತ್ರತ್ವ ವಹಿಸಿದ್ದರು.
ಮೂಡುಬಿದಿರೆ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ವಲಾತ್, ಮಜ್ಲಿಸುನ್ನೂರ್ ಮಹತ್ವವನ್ನು ತಿಳಿಸಿದರು.


ಜಲಾಲುದ್ದೀನ್ ತಂಙಳ್, ವರ್ಷಪೂರ್ತಿ ಮಜ್ಲಿಸುನ್ನೂರ್ ನೇತೃತ್ವ ನೀಡಿದ ಮಸೀದಿ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ, ಬಾಖವಿ ಪದವಿ ಪಡೆದ ವಾಲ್ಪಾಡಿ ಜಮಾಅತ್ ನ ಆಶಿರ್ ಬಾಖವಿ, ಕೌಸರಿ ಪದವಿ ಪಡೆದ ಆಖಿಫ್ ಕೌಸರಿ ( ಮುಹಮ್ಮದ್ ಹನೀಫ್ ಅವರ ಪುತ್ರರು ) ಮತ್ತು ಎಸ್.ಕೆ.ಎಸ್.ಎಸ್.ಎಫ್ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಸೈಫುದ್ದೀನ್ ವಾಲ್ಪಾಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಜಮಾತ್ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್,ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಕಾರ್ಯದರ್ಶಿ ಝಕರಿಯಾ ಯೂಸುಫ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಉಬೈದುಲ್ಲಾ ,ಕಾರ್ಯದರ್ಶಿ ಜಮಾಲುದ್ದೀನ್, ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ಮೂಡುಬಿದಿರೆ ವಲಯಾಧ್ಯಕ್ಷ ರಝಾಕ್ ಮದನಿ, ಮಕ್ಕಿ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ, ಸದರ್ ಅಬ್ದುಲ್ ಹಕೀಮ್ ಅಶ್ರಫಿ, ಇಬ್ರಾಹಿಂ ಮುಸ್ಲಿಯಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು