ಜಮೀಯತುಲ್ ಫಲಾಹ್ (ದ.ಕ,& ಉಡುಪಿ)ವತಿಯಿಂದ ಬೆಳುವಾಯಿ ಚಿಲಿಂಬಿ ನಿರ್ಮಾಣಗೊಳ್ಳಲಿರುವ ಗ್ರೀನ್ ವ್ಯೂ ಲಾ ಕಾಲೇಜಿಗೆ ಶಿಲಾನ್ಯಾಸ ಸಮಾರಂಭವು ಭಾನುವಾರ ಬೆಳಿಗ್ಗೆ ನಡೆಯಿತು.


ಜಮೀಯತುಲ್ ಫಲಾಹ್ ದ.ಕ.& ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ, ಆಳ್ವಾಸ್ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ವಕೀಲರಾದ ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್,ಎಂ.ಎಸ್.ಕೋಟ್ಯಾನ್, ಉದ್ಯಮಿ ಅಬುಲ್ ಅಲಾ ಪುತ್ತಿಗೆ,ಬೆಳುವಾಯಿ ಬ್ಲಾಸಮ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಸೈಮನ್ ಮಸ್ಕರೇನಸ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಜಮೀಯತುಲ್ ಫಲಾಹ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈಗಾಗಲೇ ಶಿರ್ತಾಡಿಯಲ್ಲಿ ಕಾನೂನು ಕಾಲೇಜು ಪ್ರಾರಂಭಗೊಂಡಿದ್ದು ಮೂಡುಬಿದಿರೆಯಲ್ಲಿ ಮತ್ತೊಂದು ಕಾನೂನು ಕಾಲೇಜು ಪ್ರಾರಂಭಗೊಳ್ಳಲಿದೆ.













