ನಾಳೆಯಿಂದ ರಂಝಾನ್ ಪ್ರಾರಂಭ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿರುವವರ ಜೊತೆಗಿರುವವರಿಗೆ, ಯಾರೂ ಇಲ್ಲದ ಹಿರಿಯ ನಾಗರಿಕರಿಗೆ ಸಹರಿ ಊಟಕ್ಕೆ ಸ್ವಲ್ಪ ಕಷ್ಟವಾಗುತ್ತದೆ.ಇದನ್ನು ಮನಗಂಡ ಮೂಡುಬಿದಿರೆಯ’ಬೆದ್ರ ಚಾರಿಟೇಬಲ್ ಟ್ರಸ್ಟ್’ ಸಹರಿ ಊಟವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ.
ಮೂಡುಬಿದಿರೆಯ ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ರೋಗಿಗಳ ಜೊತೆ ಇರುವವರಿಗೆ ಸಹರಿ ಊಟಕ್ಕೆ ಕಷ್ಟವಾದಲ್ಲಿ ಟ್ರಸ್ಟ್ ನ ಇರ್ಫಾನ್ ಬೆದ್ರ (9535828786), ಹನೀಫ್ ರಹ್ಮಾನಿಯಾ ( 9731508467) ಅಥವಾ ಇರ್ಷಾದ್ ಎನ್.ಜಿ.(8951787804) ಅವರನ್ನು ಸಂಪರ್ಕಿಸಬಹುದು.
ಸಮಾಜದಲ್ಲಿನ ಅಶಕ್ತರು,ಬಡವರು,ಅಸಹಾಯಕರಿಗೆ ನೆರವಾಗಬಲ್ಲಂತಹ ಹಲವು ಯೋಜನೆಗಳನ್ನು ರೂಪಿಸಿರುವ ‘ ಬೆದ್ರ ಚಾರಿಟಬಲ್ ಟ್ರಸ್ಟ್’ ನ ಮೊದಲ ಹೆಜ್ಜೆ ಈ ಸಹರಿ ಊಟದ ವ್ಯವಸ್ಥೆಯಾಗಿದೆ.
