ಮೂಡುಬಿದಿರೆಯ ಅಲಂಕಾರ್ ಜ್ಯುವೆಲ್ಲರ್ಸ್ ನಿಂದ ಚಿನ್ನ ಕದ್ದು ಪರಾರಿಯಾಗಲೆತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಒಂದು ಸಣ್ಣ ರೀತಿಯ ಸನ್ಮಾನ ನೆರವೇರಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆ ಮಹಾಶಯ ” ತಾನು ಗುರುರಾಯನಕೆರೆಯ ರಮೇಶ” ಎಂದು ನುಡಿದಿದ್ದಾನೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಹಕರ ಸ್ಟೈಲ್ ನಲ್ಲಿ ಅಲಂಕಾರ್ ಜ್ಯುವೆಲ್ಲರ್ಸ್ ಗೆ ಎಂಟ್ರಿ ಕೊಟ್ಟಿದ್ದ ರಮೇಶ ಅದ್ಹೇಗೋ ಎರಡು ಉಂಗುರಗಳನ್ನು ತನ್ನ ಪ್ಯಾಂಟ್ ಕಿಸೆಯೊಳಗೆ ದಿಂಜಿಸಿದ್ದಾನೆ.ಅದು ಮತ್ತೊಬ್ಬ ಗ್ರಾಹಕನ ಗಮನಕ್ಕೆ ಬಂದಿದೆ. ಆತ ಅಲ್ಲಿಂದ ಕಾಲ್ಕಿತ್ತ ಬಳಿಕ ಜುವೆಲ್ಲರಿ ಮಾಲಕನ ಗಮನಕ್ಕೆ ತಂದಿದ್ದಾರೆ. ಕೂಡಲೇ ಆತನನ್ನು ಬೆರಿಪತ್ತುವ ಕೆಲಸ ನಡೆದಿದೆ.ಅಲಂಕಾರ್ ಜುವೆಲ್ಲರ್ಸ್ ನ ಸಿಬ್ಬಂದಿಯನ್ನು ಕಂಡಕೂಡಲೇ ತನ್ನ ವಾಕಿಂಗ್ ಗೆ ಮತ್ತಷ್ಟು ವೇಗ ನೀಡಿದ್ದಾನೆ.ಆ ಸಂದರ್ಭದಲ್ಲಿ ಸಿಬ್ಬಂದಿ ಹುಡುಗಿ “ಕಲುವೆ ,ಕಲುವೆ ” ಎಂದು ಕೂಗಿದಾಗ ಸಾರ್ವಜನಿಕರೇ ಆತನನ್ನು ಸೆರೆಹಿಡಿದಿದ್ದಾರೆ.ಬಾಯಿ ಬಿಡಿಸುವ ಯತ್ನದಲ್ಲಿ ಸಣ್ಣಮಟ್ಟಿನ ಉಡುಗೊರೆ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.ಅಲ್ಲಿ ಅದ್ಯಾವ ರೀತಿಯ ಅತಿಥಿಸನ್ಮಾನ ನೀಡಿದ್ದಾರೆಂದು ಗೊತ್ತಿಲ್ಲ!
