Latest News

ದೂಷಣೆ ಮಾಡುವವರು ಮಾಡಲಿ, ಇದು ‘ಜನಮಾನಸದಲ್ಲಿ ನೆನಪಿನಲ್ಲುಳಿಯುವ ಬಜೆಟ್’: ಅಭಯಚಂದ್ರ

Picture of Namma Bedra

Namma Bedra

Bureau Report

ರಾಜ್ಯದ ಜನಮೆಚ್ಚಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ಜನಮಾನಸದಲ್ಲಿ ನೆನಪಿನಲ್ಲುಳಿಯುವ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ಧರಾಮಯ್ಯ ಅವರು ಮಂಡಿಸಿರುವ ಹದಿನಾರನೇ ಬಜೆಟ್ ದಾಖಲೆಯ ಬಜೆಟ್ ಆಗಿದೆ,ಕರ್ನಾಟಕದ ಇತಿಹಾಸದಲ್ಲಿ ಹದಿನಾರು ಬಜೆಟ್ ಗಳನ್ನು ಮಂಡಿಸಿರುವ ಯಾವ ಮುಖ್ಯಮಂತ್ರಿಯೂ ಇಲ್ಲ,ಯಾವ ಅರ್ಥಸಚಿವರೂ ಇಲ್ಲ ಎಂದು ಹೇಳಿದ ಅವರು ದೂಷಣೆ ಮಾಡುವವರು ಮಾಡುತ್ತಲೇ ಇರಲಿ,ಅವರ ಕೆಲಸವೇ ದೂಷಣೆ ಮಾಡುವುದಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ನಿರ್ಲಕ್ಷಿಸಿದ್ದರೂ ಸಿದ್ಧರಾಮಯ್ಯ ಅವರು ನಾಲ್ಕು ಸಾವಿರ ಕೋಟಿಗಳ ಬಜೆಟ್ ಮಂಡಿಸುವ ಮೂಲಕ ವಿಭಿನ್ನರೆನಿಸಿದ್ದಾರೆ,ಈ ಬಜೆಟ್ ಬಡವರಿಗೆ ,ಜನಸಾಮಾನ್ಯರಿಗೆ ,ಸಮಾಜದ ಎಲ್ಲ ವರ್ಗದವರಿಗೂ ಸಹಕಾರಿಯಾಗಿದ್ದು ಸಿದ್ಧರಾಮಯ್ಯ ಅವರು ಹೃದಯವಂತ ಮುಖ್ಯಮಂತ್ರಿ ಎನ್ನುವುದು ಮತ್ತೆ ಸಾಬೀತಾಗಿದೆ ಎಂದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು