ಮೂಡುಬಿದಿರೆ ಪುರಸಭಾ ಮಾಜಿ ಅಧ್ಯಕ್ಷ ದಿ.ಪ್ರೇಮಾನಂದ ಪ್ರಭು ಅವರ ಹಿರಿಯ ಮಗ ಪ್ರಸಾದ್ ಪ್ರಭು (45) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಮೂಡುಬಿದಿರೆಯಲ್ಲಿ ಜೆ.ಸಿ.ಬಿ ಮಾಲಕರಾಗಿದ್ದ ಅವರು ಸಾಧು ಸ್ವಭಾವದ ಯುವಕನಾಗಿ ಸರ್ವರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.
ಭಾನುವಾರ ಮಧ್ಯಾಹ್ನದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು.ಆದರೆ ರಾತ್ರಿ ವೇಳೆ ಉಸಿರಾಟದ ಸಮಸ್ಯೆಯಿಂದಾಗಿ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.
ಪ್ರಸಾದ್ ಪ್ರಭು ಅವರು ವಿವಾಹಿತರಾಗಿದ್ದು ಓರ್ವ ಪುತ್ರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.
ಅವರ ಅಂತಿಮ ಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಅವರ ಹತ್ತಿರದ ಸಂಬಂಧಿ, ಪುರಸಭಾ ಸದಸ್ಯ ಸುರೇಶ್ ಪ್ರಭು ಅವರು ತಿಳಿಸಿದ್ದಾರೆ.
