ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಸಿದ್ಧರಾಮಯ್ಯ ಆಡಳಿತ ವಿರೋಧಿಗಳಿಗೆ ಮುಖ್ಯಮಂತ್ರಿ ಅವರು ಮಂಡಿಸಿದ ಬಜೆಟ್ ಸಮರ್ಪಕ ಉತ್ತರವಾಗಿದೆ ಎಂದು ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಶಿವಾನಂದ ಪಾಂಡ್ರು ಅವರು ಹೇಳಿದ್ದಾರೆ.
ಇದು ಸಮಾಜದ ಆರ್ಥಿಕ, ಸಾಮಾಜಿಕ, ಕಾರ್ಮಿಕರ, ಮಹಿಳೆಯರ, ಮಕ್ಕಳ ಹೀಗೆ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಆಗಿದ್ದು ಪಂಚ ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ.ಮೀಸಲಿಟ್ಟಿದ್ದು ಸಿದ್ಧರಾಮಯ್ಯ ಅವರು ಮಂಡಿಸಿರುವ ಗ್ಯಾರಂಟಿ ಬಜೆಟ್ ಆಗಿದೆ ಎಂದಿದ್ದಾರೆ.
ದೇವಸ್ಥಾನಗಳ ಅರ್ಚಕರ ತಸ್ತಿಕ್ ಹಣ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಅಡುಗೆ ಸಹಾಯಕರಿಗೆ ಹೆಚ್ಚುವರಿ ಹಣ,ಜಾನುವಾರುಗಳ ಆಕಸ್ಮಿಕ ಸಾವಿಗೆ ಅನುಗ್ರಹ ಯೋಜನೆಯಡಿ ಪರಿಹಾರ ಸಹಿತ ಗ್ರಾಮೀಣ ಜನರ ಮೂಲ ಸಮಸ್ಯೆಗಳಿಗೆ ಸ್ಪಂದಿಸಿದ ಯೋಜನೆಯಾಗಿದೆ ಎಂದು ಹೇಳಿರುವ ಅವರು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಲ್ಟಿಜಿಮ್ ಪಾರ್ಕಿಂಗ್, ಕೊಂಡಿ ರಸ್ತೆಗಳ ಅಭಿವೃದ್ಧಿ, ಆಳ ಸಮುದ್ರ ಮೀನುಗಾರಿಕೆಗೆ ಪ್ರೋತ್ಸಾಹ ಸೇರಿದಂತೆ ಯೋಜನೆ ರೂಪಿಸಲಾಗಿದೆ, ಪರಿಶಿಷ್ಟರು,ಹಿಂದುಳಿದ, ಅಲ್ಪಸಂಖ್ಯಾತ ಯುವಕರ ಅಭಿವೃದ್ಧಿಗೆ ಗುತ್ತಿಗೆ ಮೀಸಲು ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಿ ಕರ್ನಾಟಕದ ಶೋಷಿತರ ಪರ ಅಭಿವೃದ್ಧಿಯ ಬಜೆಟ್ ನೀಡಲಾಗಿದೆ ಎಂದು ಶಿವಾನಂದ ಪಾಂಡ್ರು ಅವರು ಹೇಳಿದ್ದಾರೆ.
