ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಮಾಹೆ ಮಣಿಪಾಲದ ಸಹಯೋಗದಲ್ಲಿ ಪತ್ರಕರ್ತರಿಗೆ ಮಾಧ್ಯಮ ಕಾರ್ಯಾಗಾರ ಶನಿವಾರ ನಡೆಯಿತು.
ಮಣಿಪಾಲ ಇನ್ಫಾರ್ಮೇಶನ್ ಕಮ್ಯುನಿಕೇಷನ್ ನ ನಿರ್ದೇಶಕರಾದ ಡಾ.ಶುಭಾ ಎಚ್.ಎಸ್.ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ‘ ದೇಶದ ಅಭಿವೃದ್ದಿಯಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಸ್ಪಷ್ಟ ಸುದ್ಧಿಗಳ ಕುರಿತು ಹಾಗೂ ಮೊಬೈಲ್ ಜರ್ನಲಿಸಮ್ ‘ ಕುರಿತು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಶೆಟ್ಟಿ, ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಭಟ್,ಹಳೆ ವಿದ್ಯಾರ್ಥಿ ಸಂಜಯ ಭಟ್,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹರೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಧನಂಜಯ ಮೂಡುಬಿದಿರೆ, ಪ್ರಸನ್ನ ಹೆಗ್ಡೆ, ಅಶ್ರಫ್ ವಾಲ್ಪಾಡಿ, ಜೈಸನ್ ತಾಕೊಡೆ ಹಾಗೂ ಎಚ್.ಮುಹಮ್ಮದ್ ವೇಣೂರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಡಾ.ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ರಕ್ಷಿತಾ ಉಪಾಧ್ಯಾಯ ಸನ್ಮಾನಿತರನ್ನು ಪರಿಚಯಿಸಿದರು.ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು. ಧನಂಜಯ ಮೂಡುಬಿದಿರೆ ವಂದಿಸಿದರು.
ರಘುನಾಥ್ ಬದ್ರಿನಾಥ್ ಅವರು ಮೊಬೈಲ್ ಜರ್ನಲಿಸಮ್ ಬಗ್ಗೆ ಮಾಹಿತಿ ನೀಡಿದರು.