ಮೂಡುಬಿದಿರೆಯ ಜೈನಪೇಟೆ ಬಡಗು ಬಸದಿ ಬಳಿಯಲ್ಲಿರುವ ಫಾರ್ಚೂನ್ ಹೈವೇ ಕಟ್ಟಡದಲ್ಲಿ ಪ್ರಸಾದ್ ನೇತ್ರಾಲಯದ ನೂತನ ಆಸ್ಪತ್ರೆ ಭಾನುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ಜೈನಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಆಶೀರ್ವದಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಸ್ಪತ್ರೆಯನ್ನು ಡಾ.ಮೋಹನ ಆಳ್ವ ಅವರು ಉದ್ಘಾಟಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್,ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಹಾಗೂ ಫಾರ್ಚೂನ್ ಪ್ರಮೋಟರ್ಸ್ ನ ಆಡಳಿತ ಪಾಲುದಾರ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಸ್ವಾಗತಿಸಿದರು.
ನಿರ್ದೇಶಕರಾದ ರಶ್ಮಿ ಕೃಷ್ಣಪ್ರಸಾದ್, ಮೂಡುಬಿದಿರೆ ಪ್ರಸಾದ್ ನೇತ್ರಾಲಯದ ನಿರ್ದೇಶಕರಾದ ಡಾ.ಸ್ಮೃತಿ, ಡಾ.ವಿಕ್ರಮ್ ಜೈನ್, ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯೆ ಶ್ವೇತಾ ಜೈನ್,ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ನಾರಾಯಣ ಪಿ.ಎಮ್,ಅಬುಲ್ ಅಲಾ ಪುತ್ತಿಗೆ, ಸಿ.ಎಚ್.ಗಫೂರ್,,ಬಿಜೆಪಿ ಮುಖಂಡರಾದ ಸುದರ್ಶನ ಎಂ, ಕೆ.ಪಿ.ಜಗದೀಶ್ ಅಧಿಕಾರಿ,ರಂಜಿತ್ ಪೂಜಾರಿ, ಮೇಘನಾಥ ಶೆಟ್ಟಿ,ಪ್ರಸಾದ್ ನೇತ್ರಾಲಯದ ಮೆನೇಜರ್ ಅಬ್ದುಲ್ ಖಾದರ್ ,ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.