Latest News

ಫೋಕ್ಸೋ ಪ್ರಕರಣದ ಆರೋಪಿ ಮೂಡುಬಿದಿರೆಯ ಪ್ರಕಾಶ್ ಜೈಲಿನಲ್ಲೇ ಆತ್ಮಹತ್ಯೆ

Picture of Namma Bedra

Namma Bedra

Bureau Report

ಕಳೆದ ವಾರವಷ್ಟೇ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂಡುಬಿದಿರೆ ಲಾಡಿಯ ಪ್ರಕಾಶ್ ಅವರು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.
ಪಕ್ಕದ್ಮನೆಯ ಹದಿಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಲಾಡಿ ಅಜಂಕಲ್ಲು ನಿವಾಸಿ ಪ್ರಕಾಶ್ (57) ಎಂಬವರನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಜೈಲಿನಲ್ಲಿದ್ದ ಪ್ರಕಾಶ್ ಅವರು ಭಾನುವಾರ ಬೆಳಿಗ್ಗೆ ಜೈಲಿನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು