ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಈ ತಿಂಗಳ 10 ಕೆ.ಜಿ.ಮತ್ತು ಕಳೆದ ತಿಂಗಳ 5 ಕೆ.ಜಿ – ಒಟ್ಟು ಹದಿನೈದು ಕೆ.ಜಿ.ಅಕ್ಕಿಯನ್ನು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರಿಂದು ಮೂಡುಬಿದಿರೆ ಪಡಿತರ ಅಂಗಡಿಗಳಲ್ಲಿ ವಿತರಿಸಿದರು.



ಇದೇ ಸಂದರ್ಭದಲ್ಲಿ ಜನರ ಕೆಲವೊಂದು ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಶೌಕತ್ ಬೆಳುವಾಯಿ, ಶಕುಂತಲಾ ದೇವಾಡಿಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.