ಬೀ- ಹ್ಯೂಮನ್ (ಸರ್ವಿಂಗ್ ಹ್ಯುಮಾನಿಟಿ) ಸಂಸ್ಥೆಯ ವತಿಯಿಂದ ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಯಂತ್ರ,ಟಿ.ವಿ.ಮತ್ತು ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಬೀ ಹ್ಯೂಮನ್ ಸಂಸ್ಥೆಯು ಪ್ರತೀ ತಿಂಗಳು 90 ಮಂದಿ ರೋಗಿಗಳಿಗೆ ಒಂದು ಸಾವಿರದಷ್ಟು ಡಯಾಲಿಸಿಸ್ ಸೇವೆಗಳನ್ನು ಒದಗಿಸುತ್ತಿದ್ದು ರೋಗಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಕೇಂದ್ರೀಕರಿಸಿ ಈ ಕೊಡುಗೆಗಳನ್ನು ನೀಡಲಾಗಿದೆ.

ಬೀ ಹ್ಯೂಮನ್ ಸಂಸ್ಥೆಯ ಟ್ರಸ್ಟಿ ಶರೀಫ್ ಬೋಳಾರ್ ( ವೈಟ್ ಸ್ಟೋನ್)ಮತ್ತು ಉದ್ಯಮಿ ಅಬುಲ್ ಅಲಾ ಪುತ್ತಿಗೆ ಅವರು ಉದ್ಘಾಟಿಸಿದರು.
ಸಂಸ್ಥೆಯ ಸಂಸ್ಥಾಪಕ ಆಸಿಫ್ ಡೀಲ್ಸ್, ವೈದ್ಯಾಧಿಕಾರಿ ಡಾ.ಅಕ್ಷತಾ,ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್, ಡೀಮ್ ಎನ್.ಆರ್.ಐ.ನ ಕೋ ಆರ್ಡಿನೇಟರ್ ಇಮ್ರಾನ್ ಹಸನ್,ನವಾಝ್,ಹನೀಫ್ ರಹ್ಮಾನಿಯಾ, ಮಾಲಿಕ್ ಅಝೀಝ್,ಅಝ್ವೀರ್,ಅಲ್ ಫುರ್ಖಾನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶಾಹಮ್,ಅಶ್ರಫ್ ಮರೋಡಿ,ಶಾಫಿ ಪಡ್ಡಂದಡ್ಕ,ಬೀ ಹ್ಯೂಮನ್ ಮೆಡಿಕಲ್ ಇನ್ಚಾರ್ಜ್ ಹನೀಫ್ ತೋಡಾರ್, ನ್ಯಾಯವಾದಿ ಇರ್ಷಾದ್ ಎನ್.ಜಿ, ಅಬೂಬಕ್ಕರ್ ಕೆ.ಎಸ್, ಆಸ್ಪತ್ರೆ ಸಿಬ್ಬಂದಿ ರೇಖಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.