ಸೆಕೀನ. ಶಿರ್ತಾಡಿ ಗ್ರಾಮದ ಮಕ್ಕಿಯ ಮಹಮ್ಮದ್ ಅವರ ಪತ್ನಿ. ಅನಾರೋಗ್ಯದಿಂದಲೇ ಇರುವ ಈ ಬಡ ಕುಟುಂಬದ ಮಹಿಳೆಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕಾಲಿನಲ್ಲಿದ್ದ (ಕುರು) ಗಾಯವು ಶುಗರ್ ನಿಂದಾಗಿ ಉಲ್ಬಣಿಸಿ ಆ ಗಾಯವು ಇದೀಗ ಆಪರೇಷನ್ ಮಾಡಿಸಬೇಕಾದ ಸ್ಥಿತಿಗೆ ತಲುಪಿದೆ.

ಬಡವರಾದ ಕಾರಣ ಸರಕಾರಿ ಆಸ್ಪತ್ರೆಯಿಂದಲೇ ಮದ್ದು ತರುತ್ತಿದ್ದರು.ಆದರೆ ಅದು ತೀರಾ ದೊಡ್ಡ ಹಂತಕ್ಕೆ ಬೆಳೆದಿದೆ ಎಂದು ಗೊತ್ತಾದದ್ದು ಶಿರ್ತಾಡಿಯ ಖಾಸಗಿ ವೈದ್ಯರಿಂದಲೇ.
ಇದೀಗ ಅಪರೇಷನ್ ಹೇಗೋ ಮಾಡಿಸಿ ಕಾಲಿನಲ್ಲಿದ್ದ ಹುಳಗಳನ್ನೆಲ್ಲಾ ಹೊರತೆಗೆದಿದ್ದಾರೆ.ಆಪರೇಷನ್ ಬಾಬ್ತು ಪಾವತಿಸಲು ಆ ಬಡ ಕುಟುಂಬದಲ್ಲಿ ಸದ್ಯಕ್ಕೆ ಕಷ್ಟವಾಗಿದೆ.ಮುಹಮ್ಮದ್ ಅವರೂ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.ಹಾಗಾಗಿ ಸಹೃದಯಿ ದಾನಿಗಳು ಈ ಬಡ ಮಹಿಳೆಗೆ ಒಂದಿಷ್ಟು ಆರ್ಥಿಕ ಸಹಾಯ ಮಾಡಬೇಕಾದ ಅಗತ್ಯವಿದೆ.
ಸಹಾಯ ಮಾಡಲಿಚ್ಚಿಸುವವರು ಇಲ್ಲಿ ನೀಡಲಾದ ಸ್ಕ್ಯಾನರ್ ಗೆ ಕಳುಹಿಸಬಹುದು.