ಎಷ್ಟೇ ದೂರದ ವಿದೇಶಗಳಿಗೆ ಹೋದರೂ ನಮ್ಮವರು ತಮ್ಮ ಊರಿನ ಹೆಸರನ್ನು, ಹುಟ್ಟೂರ ಪ್ರೀತಿ,ಅಭಿಮಾನವನ್ನು ಮರೆಯಲ್ಲ. ಊರ ವಿಷಯ ಬಂದಾಗ ಬಿಟ್ಟುಕೊಡುವುದೂ ಇಲ್ಲ.
ಕೆಲ ದಿನಗಳಿಂದ ಹಲವರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಬಸ್ಸಿನ ಹಿಂಬದಿಯ ಗಾಜಿನಲ್ಲಿ ಬೆದ್ರ ಹೆಸರು ಬರೆದು ಹುಟ್ಟೂರ ಹೆಸರಿನ ಅಭಿಮಾನದ ಬಗ್ಗೆ ಬರುತ್ತಲೇ ಇದೆ.ಆದರೆ ಆ ಅಭಿಮಾನ ವ್ಯಕ್ತಪಡಿಸಿದವರು ಯಾರು ? ಅವರೆಲ್ಲಿಯವರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಈ ರೀತಿಯ ಅಭಿಮಾನ ತೋರಿಸಿ ವೈರಲ್ ಆದವರ ಹೆಸರು ಮೂಡುಬಿದಿರೆ ಕಲ್ಲಬೆಟ್ಟುವಿನ ಮುಹಮ್ಮದ್ ಆಲಿ.
ಹಲವು ವರ್ಷಗಳಿಂದ ಸೌದಿ ಅರೇಬಿಯಾದ ಜುಬೈಲ್ ನಲ್ಲಿರುವ ಆಲಿ ಅಲ್ಲೇ ಸ್ವಂತ ಬಸ್ ಹೊಂದಿದ್ದಾರೆ.ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಾರೆ.ಅಲ್ಲದೆ ಅಲ್ಲಿ ಬಾಡಿಗೆಗೂ ನೀಡುತ್ತಾರೆ.
ಕಲ್ಲಬೆಟ್ಟು ಪಿಲಿಪಂಜರದವರಾಗಿರುವ ಆಲಿ ಈ ಹಿಂದೆ ಊರಲ್ಲಿ ಕೊಹಿನೂರು ಎಂಬ ಹೆಸರಿನ ರಿಕ್ಷಾ ಓಡಿಸುತ್ತಿದ್ದರು.
ಜುಬೈಲ್ ನಲ್ಲಿ ವಾಸವಾಗಿರುವ ಅವರು ತನ್ನ ಬಸ್ ನಲ್ಲಿ ‘ಬೆದ್ರ’ ಎಂದು ತನ್ನ ಊರಿನ ಹೆಸರನ್ನು ಬರೆಸುವ ಮೂಲಕ ಬೆದ್ರದ ಹೆಸರನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.