ಪೆಲೆಸ್ತೀನ್, ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್ ವೈಮಾನಿಕ ದಾಳಿಯಿಂದ ಮುಸ್ಲಿಂ ಸಮುದಾಯದ ಸಣ್ಣ ಸಣ್ಣ ಮಕ್ಕಳ ಸಹಿತ ನೂರಾರು ಜನರ ನರಮೇಧವಾಗುತ್ತಿದ್ದು ಈ ಕೃತ್ಯವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಮೂಡುಬಿದಿರೆ ಎಸ್.ಡಿ.ಪಿ.ಐ.ವತಿಯಿಂದ ಶುಕ್ರವಾರದ ಜುಮ್ಮಾ ನಮಾಝ್ ಬಳಿಕ ಪ್ರತಿಭಟನೆ ನಡೆಯಿತು.

ಎಸ್.ಡಿ.ಪಿ.ಐ ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಆಸಿಫ್, ಕಾರ್ಯದರ್ಶಿ ಫಿರೋಝ್ ಹಂಡೇಲ್,ಉಪಾಧ್ಯಕ್ಷ ಇಸ್ಮಾಯಿಲ್ ಕೋಟೆಬಾಗಿಲು,ಜತೆ ಕಾರ್ಯದರ್ಶಿ ರವೂಫ್ ಹಂಡೇಲ್,ಕೋಶಾಧಿಕಾರಿ ಇಬ್ರಾಹಿಂ ಹಂಡೇಲ್, ಆಸಿಫ್ ವಾಲ್ಪಾಡಿ, ಹುಸೈನ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿದ್ದರು.