ತನಗೆ ಸಿಕ್ಕಿದ ನಗದು ಮತ್ತು ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಒಪ್ಪಿಸುವ ಮೂಲಕ ಮಾಂಟ್ರಾಡಿಯ ಕಟ್ಟಡ ಕಾಂಟ್ರಾಕ್ಟರ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕೊಣಾಜೆ ನಿವಾಸಿ ವಾಸು ಎಂಬವರು 22 ಸಾವಿರ ನಗದು ಹಾಗೂ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿದ್ದರು.ಇದು ಮಾಂಟ್ರಾಡಿಯ ಗುತ್ತಿಗೆದಾರ ನಝೀರ್ ಅವರಿಗೆ ಸಿಕ್ಕಿತ್ತು.
ಕಳೆದುಕೊಂಡ ವ್ಯಕ್ತಿ ವಾಸು ಎಂಬವರೆಂದು ಗೊತ್ತಾದ ಕೂಡಲೇ ಅದನ್ನು ಧ.ಗ್ರಾ.ಯೋಜನೆಯ ಮಾಂಟ್ರಾಡಿ ವಲಯದ ಮಾಜಿ ಅಧ್ಯಕ್ಷ ವಸಂತ ಅವರ ಸಮ್ಮುಖದಲ್ಲಿ ಹಸ್ತಾಂತರಿಸುವ ಮೂಲಕ ನಝೀರ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
